Thursday, August 11, 2022

Latest Posts

ಉಡುಪಿ| ಜಿಲ್ಲೆಯಲ್ಲಿ ಶೇ. 67.9 ಮಂದಿ ಕೊರೋನಾ ವೈರಸ್ ಮುಕ್ತ: ಕೋವಿಡ್-19 ವಾರ್ ರೂಂ

ಉಡುಪಿ: ನಿನ್ನೆಯಷ್ಟೇ ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ 22 ಮಂದಿಯಲ್ಲಿ ನೋವೆಲ್ ಕೊರೋನಾ ವೈರಸ್ ಕಂಡು ಬಂದರೂ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣದಲ್ಲಿದೆ ಎಂಬುದು ಕರ್ನಾಟಕ ರಾಜ್ಯ ಕೋವಿಡ್-19 ವಾರ್ ರೂಂ ಅಂಕಿ ಅಂಶಗಳು ಖಚಿತಪಡಿಸುತ್ತಿವೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 969 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಗುರುವಾರಕ್ಕೆ ಅನ್ವಯವಾಗುವಂತೆ ಕಳೆದ ಐದು ದಿನಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ದೈನಂದಿನ ಬೆಳವಣಿಗೆ ದರವು ಗಣನೀಯವಾಗಿ ಇಳಿಕೆಯಾಗಿದ್ದು ಶೇ. 1.7 ಆಗಿದೆ. ಒಂದು ವಾರದ ಹಿಂದೆ ಜಿಲ್ಲೆಯಲ್ಲಿ ಈ ಪ್ರಮಾಣವು ಶೇ. 36.2ಕ್ಕೆ ಏರಿಕೆಯಾಗಿದ್ದಷ್ಟೇ ಅಲ್ಲದೆ, ಪ್ರತಿದಿನ ಸರಾಸರಿ ನೂರು ಖಚಿತ ಪ್ರಕರಣಗಳು ಕಂಡುಬರುತ್ತಿದ್ದವು. ಪ್ರಸ್ತುತ ರಾಜ್ಯದಲ್ಲಿ ಸರಾಸರಿ ಹೆಚ್ಚಳ ದರವು ಶೇ. 3.7ರಷ್ಟಿದೆ.

ದಶಲಕ್ಷ ಜನರಲ್ಲಿ 5621 ಕೋವಿಡ್ ಪರೀಕ್ಷೆ: ಕೋವಿಡ್-19 ಪ್ರಕರಣಗಳು ಉಡುಪಿ ಜಿಲ್ಲೆಯಲ್ಲಿ ಇಮ್ಮಡಿಯಾಗಲು ತೆಗೆದುಕೊಳ್ಳುವ ಅವಧಿಯೂ ಜಾಸ್ತಿಯಾಗುತ್ತಿದೆ. ಒಂದೊಮ್ಮೆ ಒಂದೇ ದಿನದಲ್ಲಿ ಇಮ್ಮಡಿಯಾಗುತ್ತಿದ್ದರೆ, ಪ್ರಸ್ತುತ 8 ದಿನಗಳನ್ನು ತೆಗೆದುಕೊಂಡಿದೆ.

ರಾಜ್ಯದಲ್ಲಿ ಈ ಅವಧಿಯು ಇನ್ನೂ ಹೆಚ್ಚಾಗಿದೆ, ಪ್ರಕರಣಗಳು ದ್ವಿಗುಣವಾಗುವ ಅವಧಿ 12 ದಿನಗಳಾಗಿವೆ. ಆದರೆ ಪ್ರಸುತ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗೊಳಪಡಿಸುವವರ ಸಂಖ್ಯೆ ಕಡಿಮೆಯಾಗಿದ್ದು, ಈವರೆಗೆ ಪರೀಕ್ಷೆಗೊಳಪಡಿಸಿದ ತಲಾ 100 ಮಂದಿಯಲ್ಲಿ ಶೇ. 8ರಷ್ಟು ಸೋಂಕು ಕಂಡುಬಂದಿದೆ. ಕಳೆದ 10 ದಿನಗಳಲ್ಲಿ ಪ್ರತೀ ದಶಲಕ್ಷ ಜನರಲ್ಲಿ 5621 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಶೇ. 98.25 ಜನರಲ್ಲಿ ಲಕ್ಷಣರಹಿತ ಸೋಂಕು: ಉಡುಪಿ ಜಿಲ್ಲೆಯ ಒಟ್ಟು 969 ಪ್ರಕರಣಗಳಲ್ಲಿ ಸೋಂಕಿನ ರೋಗ ಲಕ್ಷಣಗಳು ಗೋಚರಿಸಿದ್ದು, ಕೇವಲ 17 ಜನರಲ್ಲಿ ಮಾತ್ರ. ಅಂದರೆ ಜಿಲ್ಲೆಯ ಶೇ. 98.25 ಜನರಲ್ಲಿ ಯಾವುದೇ ರೋಗ ಲಕ್ಷಣಗಳನ್ನು ತೋರಿಸದೇ ನೋವೆಲ್ ಕೊರೋನಾ ವೈರಸ್ ದಾಳಿ ಮಾಡಿದೆ. ಸೋಂಕಿತರ ಪೈಕಿ 32 ಮಂದಿ 60ವರ್ಷ ಪ್ರಾಯ ಮೇಲ್ಪಟ್ಟ ಹಿರಿಯ ನಾಗರಿಕರು ಸೇರಿದ್ದಾರೆ. ಇದರಲ್ಲಿ ಉಡುಪಿ ಜಿಲ್ಲೆ ಮೂರನೇ ಸ್ಥಾನದಲ್ಲಿದೆ.

ಶೇ. 67.9 ಮಂದಿ ಸೋಂಕು ಮುಕ್ತ: ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು 658 ಮಂದಿ ಸೋಂಕು ಮುಕ್ತರಾಗಿದ್ದಾರೆ. ಇವರೆಲ್ಲರೂ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಅಂದರೆ ಜಿಲ್ಲೆಯಲ್ಲಿ ವ್ಯಾಧಿ ಗುಣಮುಖರಾಗುವ ಪ್ರಮಾಣ ಶೇ. 67.9ರಷ್ಟಾಗಿದೆ. ಇನ್ನು ಕೇವಲ ಶೇ. 30ರಷ್ಟು ಅಂದರೆ 308 ಮಂದಿಯಲ್ಲಿ ಮಾತ್ರ ವೈರಸ್ ಸಕ್ರಿಯವಾಗಿದೆ. ಜಿಲ್ಲೆಯಲ್ಲಿ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಸೋಂಕು ತಗುಲಿದ ಇನ್ನಿಬ್ಬರು ದ.ಕ. ಜಿಲ್ಲೆಯವರಾಗಿದ್ದು, ಸೋಂಕು ದೃಢಗೊಳ್ಳುವ ಮೊದಲೇ ಅಲ್ಲಿಗೆ ತೆರಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss