Wednesday, August 10, 2022

Latest Posts

ಉಡುಪಿ ಜಿಲ್ಲೆಯಲ್ಲಿ ಶೇ. 76.41ರಷ್ಟು ಚೇತರಿಕೆ ಪ್ರಮಾಣ: ಇಂದು 254 ಕೊರೋನಾ ಪಾಸಿಟಿವ್

ಉಡುಪಿ: ಜಿಲ್ಲೆಯಲ್ಲಿ ಸಾಂಕ್ರಮಿಕ ಕೋವಿಡ್-19 ಸೋಂಕಿಗೆ ತುತ್ತಾದವರಲ್ಲಿ ಚೇತರಿಕೆ ಪ್ರಮಾಣ ಶೇ. 76.41ಕ್ಕೆ ಏರಿದೆ. ಇಲ್ಲಿಯವರೆಗೆ ಉಡುಪಿ ಜಿಲ್ಲೆಯಲ್ಲಿ 8798 ಜನರು ಗುಣಮುಖರಾಗಿದ್ದಾರೆ.
ಭಾನುವಾರ 195 ಜನರು ನೋವೆಲ್ ಕೊರೋನಾ ವೈರಸ್ ರೋಗದಿಂದ ಮುಕ್ತರಾಗಿದ್ದಾರೆ. ಇವರಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದವರು 82 ಮಂದಿ, ಉಳಿದ 113 ಜನರು ಮನೆ ಆರೈಕೆಯಲ್ಲಿಯೇ ಚೇತರಿಸಿಕೊಂಡಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಒಟ್ಟು 11,513 ಮಂದಿ ಸೋಂಕಿತರಲ್ಲಿ 8798 ಜನರು ಗುಣಮುಖರಾಗಿ ಸೋಂಕಿನಿಂದ ಸಂಪೂರ್ಣವಾಗಿ ಮುಕ್ತರಾಗಿದ್ದಾರೆ. ಪ್ರಸಕ್ತ 2,620 ಜನರಲ್ಲಿ ಕೊರೋನಾ ವೈರಸ್ ಸಕ್ರಿಯವಾಗಿದೆ. ಜಿಲ್ಲೆಯಲ್ಲಿ 95 ಜನರು ಮೃತಪಟ್ಟಿದ್ದಾರೆ.
24ತಾಸುಗಳಲ್ಲಿ ಶೇ. 25.68ರಷ್ಟು ಸೋಂಕು ದೃಢ
ಭಾನುವಾರ ಆರೋಗ್ಯ ಇಲಾಖೆಗೆ ಒಟ್ಟು 989 ವರದಿಗಳು ಲಭಿಸಿವೆ. ಇವುಗಳಲ್ಲಿ 254 ವರದಿಗಳು ಕೋವಿಡ್-19 ಪಾಸಿಟಿವ್ ಮತ್ತು 735 ವರದಿಗಳು ನೆಗೆಟಿವ್ ಆಗಿವೆ. ಅಂದರೆ ಪರೀಕ್ಷೆಗೊಳಪಟ್ಟವರಲ್ಲಿ ಶೇ. 25.68ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೊಸ ಸೋಂಕಿತರಲ್ಲಿ 105 ಮಂದಿಯಲ್ಲಿ ರೋಗ ಲಕ್ಷಣಗಳಿವೆ. ಉಳಿದ 149 ಜನರಲ್ಲಿ ಯಾವುದೇ ಲಕ್ಷಣಗಳು ಗೋಚರಿಸಿಲ್ಲ. ಉಡುಪಿ ತಾಲೂಕಿನಲ್ಲಿ 145, ಕುಂದಾಪುರ ತಾಲೂಕಿನಲ್ಲಿ 61 ಮತ್ತು ಕಾರ್ಕಳ ತಾಲೂಕಿನಲ್ಲಿ 40 ಮಂದಿಗೆ ವ್ಯಾಧಿ ಅಂಟಿದೆ. ಹೊರ ಜಿಲ್ಲೆಯ 8 ಮಂದಿ ಸೋಂಕಿತರಾಗಿದ್ದಾರೆ.
ಹೊಸದಾಗಿ ಸೋಂಕು ಪತ್ತೆಯಾದವರಲ್ಲಿ 155 ಪುರುಷರು ಮತ್ತು 99 ಮಹಿಳೆಯದ್ದಾರೆ. ಇವರಲ್ಲಿ 176 ಮಂದಿ ಮನೆ ಆರೈಕೆಯನ್ನು ಆಯ್ದುಕೊಂಡಿದ್ದಾರೆ. ಉಳಿದವರಿಗೆ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಭಾನುವಾರ ಮತ್ತೆ 1029 ಮಂದಿಯ ಗಂಟಲ ದ್ರವದ ಮಾದರಿ ಪಡೆಯಲಾಗಿದೆ. ಇವರಲ್ಲಿ 240 ಜನರ ವರದಿ ಬರಲು ಬಾಕಿ ಇದೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss