Friday, July 1, 2022

Latest Posts

ಉಡುಪಿ ಜಿಲ್ಲೆಯಲ್ಲಿ 126 ಮಂದಿಗೆ ಕೊರೋನಾ ಪಾಸಿಟಿವ್ ದೃಢ, 154 ಮಂದಿ ಗುಣಮುಖ

ಉಡುಪಿ: ಆರೋಗ್ಯ ಇಲಾಖೆಗೆ ಭಾನುವಾರ ಲಭಿಸಿದ 126 ವರದಿಗಳು ಕೋವಿಡ್ ಪಾಸಿಟಿವ್ ಆದರೆ, ಬರೋಬ್ಬರಿ 2039 ವರದಿಗಳು ಕೋವಿಡ್ ನೆಗೆಟಿವ್ ಆಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಹೊಸ ಸೋಂಕಿತರಲ್ಲಿ 69 ಮಂದಿಯಲ್ಲಿ ರೋಗ ಲಕ್ಷಣಗಳಿದ್ದರೆ, 57 ಜನರಲ್ಲಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಉಡುಪಿ ತಾಲೂಕಿನಲ್ಲಿ 53, ಕುಂದಾಪುರ ತಾಲೂಕಿನಲ್ಲಿ 47 ಮತ್ತು ಕಾರ್ಕಳ ತಾಲೂಕಿನಲ್ಲಿ 20 ಮಂದಿಗೆ ವ್ಯಾಧಿ ಅಂಟಿದೆ. ಹೊರ ಜಿಲ್ಲೆಯ ಆರು ಜನರು ಸೋಂಕಿತರಾಗಿದ್ದಾರೆ.
ಉಡುಪಿ ಜಿಲ್ಲೆಯ ಒಟ್ಟು 14,038 ಮಂದಿಗೆ ಈವರೆಗೆ ಕೋವಿಡ್-19 ಸೋಂಕು ಅಂಟಿದೆ. ಇವರಲ್ಲಿ 12,176 ಜನರು ಗುಣಮುಖರಾಗಿದ್ದಾರೆ. ಅಂದರೆ ಚೇತರಿಕೆ ಪ್ರಮಾಣ ಶೇ. 86.41ರಷ್ಟಿದೆ. ಸೋಂಕು ತಗುಲಿದ 130 ಮಂದಿ ಈವರೆಗೆ ಮೃತಪಟ್ಟಿದ್ದಾರೆ. ಸದ್ಯ 1732 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಜಿಲ್ಲೆಯಲ್ಲಿ ಭಾನುವಾರ 154 ಮಂದಿ ಕೋವಿಡ್-19 ಸೋಂಕಿನಿಂದ ಗುಣಮುಖರಾಗಿದ್ದಾರೆ.
ಭಾನುವಾರ ಮತ್ತೆ ಹೊಸದಾಗಿ 2019 ಮಂದಿಯ ಗಂಟಲ ದ್ರವದ ಮಾದರಿಯನ್ನು ಕೋವಿಡ್ ಪರೀಕ್ಷೆಗಾಗಿ ಪಡೆಯಲಾಗಿದೆ. ಇವರಲ್ಲಿ 305 ಜನರ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ. ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss