Sunday, August 14, 2022

Latest Posts

ಉಡುಪಿ ಜಿಲ್ಲೆಯಲ್ಲಿ 855 ಮಂದಿಗೆ ಕೊರೋನಾ ಸೋಂಕು, 642 ಮಂದಿ ಚೇತರಿಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸದಿಗಂತ ವರದಿ, ಉಡುಪಿ:

ಉಡುಪಿ ಜಿಲ್ಲೆಯಲ್ಲಿ ಸೋಮವಾರ ಮತ್ತೆ ಮೂವರು ತೀವ್ರ ತರಹದ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಮೃತಪಟ್ಟ ಸೋಂಕಿತರ ಸಂಖ್ಯೆ 236ಕ್ಕೆ ಹೆಚ್ಚಳವಾಗಿದೆ.
ಉಡುಪಿ ತಾಲೂಕಿನ 72 ಮತ್ತು 50 ವರ್ಷ ಪ್ರಾಯದ ಮಹಿಳೆಯರು ಹಾಗೂ 73ರ ಹರೆಯದ ವೃದ್ಧ ಸಾವನ್ನಪ್ಪಿದ್ದಾರೆ. ಕೋವಿಡ್ ಉಲ್ಬಣಗೊಂಡು, ಚಿಕಿತ್ಸೆ ಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಎಲ್ಲರಿಗೂ ತೀವ್ರ ಉಸಿರಾಟದ ಸಮಸ್ಯೆ ಮತ್ತು ಬಹು ಅಂಗಾಂಗ ವೈಲ್ಯವೂ ಉಂಟಾಗಿತ್ತು.
855 ಜನ ಹೊಸ ಸೋಂಕಿತರು
ಉಡುಪಿ ಜಿಲ್ಲೆಯಲ್ಲಿ ಸೋಮವಾರ 855 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ 227 ಜನರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು, ಉಳಿದವರಲ್ಲಿ ಲಕ್ಷಣಗಳು ಗೋಚರಿಸಿಲ್ಲ. ಉಡುಪಿ ತಾಲೂಕಿನ 452, ಕುಂದಾಪುರದ 369 ಮತ್ತು ಕಾರ್ಕಳ ತಾಲೂಕಿನ 30 ಹಾಗೂ ಹೊರ ಜಿಲ್ಲೆಯ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 15 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಉಳಿದವರು ಮನೆ ಆರೈಕೆಯಲ್ಲಿದ್ದಾರೆ.
ಹೊಸದಾಗಿ 642 ಮಂದಿ ಚೇತರಿಕೆ
ಜಿಲ್ಲೆಯಲ್ಲಿ 642 ಜನರು ಕೋವಿಡ್ ಸೋಂಕು ಮುಕ್ತರಾಗಿದ್ದಾರೆ. ಈವರೆಗೆ ಕೋವಿಡ್ ಪರೀಕ್ಷೆಗೊಳಪಟ್ಟ 5,31,012 ಜನರಲ್ಲಿ 40,733 ಮಂದಿಗೆ ಸೋಂಕು ದೃಢಪಟ್ಟಿದೆ. ಇದುವರೆಗೆ ಒಟ್ಟು 33,915 ಮಂದಿ ರೋಗ ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ ಚೇತರಿಕೆ ದರ ಶೇ. 83.44ರಷ್ಟಿದೆ. ಜಿಲ್ಲೆಯಲ್ಲಿರುವ 6582 ಸಕ್ರಿಯ ಪ್ರಕರಣಗಳಲ್ಲಿ 770 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 5812 ಮಂದಿ ಮನೆ ಆರೈಕೆಯಲ್ಲಿದ್ದಾರೆ. ಇದುವರೆಗೆ 236 ಮಂದಿ ಮೃತಪಟ್ಟಿದ್ದಾರೆ. ಮಾರಣಾಂತಿಕ ಪ್ರಕರಣಗಳ ಪ್ರಮಾಣ ಶೇ. 0.58ರಷ್ಟಿದೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss