Monday, July 4, 2022

Latest Posts

ಉಡುಪಿ ಜಿಲ್ಲೆಯ ಐದು ಗ್ರಾಮಗಳಲ್ಲಿ ಅತ್ಯಂತ ಭಾರೀ ಮಳೆ: 205 ಮಿ.ಮೀ. ಅಧಿಕ ಮಳೆ ದಾಖಲು

ಉಡುಪಿ: ಅರಬ್ಬಿ ಸಮುದ್ರದ ಮೇಲ್ಮೈಯಲ್ಲಿ ಕುಳಿರ್ಗಾಳಿ ಬೀಸುತ್ತಿರುವ ಪರಿಣಾಮ ಕರಾವಳಿ ಪ್ರದೇಶದಲ್ಲಿ ವ್ಯಾಪಕವಾಗಿ ಧಾರಾಕಾರ ಮಳೆಯಾಗುತ್ತಿದೆ. ನಿನ್ನೆ ಸಂಜೆಯಿಂದ ಉಡುಪಿಯಲ್ಲಿ ಹನಿ ಕಡಿಯದೇ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಐದು ಗ್ರಾಮಗಳಲ್ಲಿ ಅತ್ಯಂತ ಭಾರೀ ಮಳೆ ಸುರಿದಿದೆ.

ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಜಿಲ್ಲೆಯ ಇನ್ನಂಜೆ ಗ್ರಾಮ ವ್ಯಾಪ್ತಿಯಲ್ಲಿ ಅತ್ಯಧಿಕ 281ಮಿ.ಮೀ. ಮಳೆ ದಾಖಲಾಗಿದೆ. ಬಡಾನಿಡಿಯೂರು ಗ್ರಾಮದಲ್ಲಿ 276, ಮುಂಡ್ಕೂರಿನಲ್ಲಿ 255, ಕೋಡಿ ಗ್ರಾಮದಲ್ಲಿ 231 ಮತ್ತು ಹೆಜಮಾಡಿಯಲ್ಲಿ 215 ಮಿ.ಮೀ. ಮಳೆ ಬಿದ್ದಿದೆ.

30 ಗ್ರಾಮಗಳಲ್ಲಿ ಅತಿ ಭಾರಿ ಮಳೆ: ಅಲ್ಲದೇ ಜಿಲ್ಲೆಯ ಮೂವತ್ತು ಗ್ರಾಮಗಳಲ್ಲಿ ಅತಿ ಭಾರೀ ಮಳೆಯಾಗಿದೆ. ಬಳ್ಕೂರು ಗ್ರಾಮದಲ್ಲಿ 195, ಮಣಿಪುರ 184, ಕೋಣಿ 183, ಕಲ್ಯ ಮತ್ತು ಕೆಮ್ಮಣ್ಣು 172, ಮಲ್ಲಾರು 165, ಕಾಂತಾವರ 158, ಚಾಂತಾರು 152, ಎರ್ಲಪ್ಪಾಡಿ 148, ಐರೋಡಿ ಮತ್ತು ಹಂದಾಡಿ 144, ಮಜೂರು, ತೆಂಕನಿಡಿಯೂರು ಮತ್ತು ಹಕ್ಲಾಡಿ 142, ಕಾಪು 140, ಗಂಗೊಳ್ಳಿ 137, ಕಿರಿಮಂಜೇಶ್ವರ 133, ಕಟ್‌ಬೆಲ್ತೂರು 132, ಕೋಟೆ 130, ನಾಡಾ 129, ಕಟಪಾಡಿ 127, ಇರ್ವತ್ತೂರು 124, ನಂದಳಿಕೆ ಮತ್ತು ಕುಂಜಾಲು 122, ಉದ್ಯಾವರ 119, ಗೋಪಾಡಿ 118, ಆಲೂರು ಮತ್ತು ಯಡ್ತಾಡಿ 117, ಕುಂಭಾಶಿ 116 ಹಾಗೂ ಬೊಮ್ಮರಬೆಟ್ಟು 115 ಮಿ.ಮೀ. ಮಳೆ ಸುರಿದಿದೆ.

ಜಿಲ್ಲೆಯಲ್ಲಿ ಸರಾಸರಿ 93 ಮಿ.ಮೀ. ಮಳೆ: ಇದೇ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 93 ಮಿ.ಮೀ. ಮಳೆ ದಾಖಲಾಗಿದೆ. ಉಡುಪಿ ತಾಲೂಕಿನಲ್ಲಿ ಗರಿಷ್ಠ 135.6 ಮಿ.ಮೀ. ಮಳೆ ಬಿದ್ದಿದೆ. ಕುಂದಾಪುರ ತಾಲೂಕಿನಲ್ಲಿ 65.5 ಮಿ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 90 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದರೂ ಉಡುಪಿ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಬೀಳುತ್ತಿದೆ. ನಿನ್ನೆ ಸಂಜೆಯಿಂದ ಶುರುವಾದ ಮಳೆ ಎಡೆಬಿಡದೇ ಏರಿಳಿತ ತೀವ್ರತೆಯೊಂದಿಗೆ ಸುರಿದಿದೆ. ರಾತ್ರಿಯಿಂದ ಮುಂಜಾನೆಯವರೆಗೆ ಉತ್ತಮ ವರ್ಷಧಾರೆಯಾಗಿದೆ. ಇದೀಗ ಮಧ್ಯಾಹ್ನ ನಂತರ ಮಳೆಯ ತೀವ್ರತೆ ಕೊಂಚ ತಗ್ಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss