Thursday, June 30, 2022

Latest Posts

ಉಡುಪಿ ಜಿಲ್ಲೆಯ ಪಾಲಿಗೆ ಶುಭವಾದ ಗ್ರಹಣ: ಇಂದಿಲ್ಲ ಯಾವುದೇ ಹೊಸ ಕೋವಿಡ್-19 ಖಚಿತ ಪ್ರಕರಣ!

ಉಡುಪಿ: ಹೊಸದಾಗಿ ಭಾನುವಾರ 27 ವರದಿಗಳು ಆರೋಗ್ಯ ಇಲಾಖೆ ಕೈಸೇರಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಯಾವುದೇ ಹೊಸ ಕೋವಿಡ್-19 ಖಚಿತ ಪ್ರಕರಣ ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 1063  ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈವರೆಗೆ ಮಾದರಿ ಸಂಗ್ರಹಿಸಿದ 13.412  ಜನರಲ್ಲಿ 12,082  ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ಜಿಲ್ಲೆಯಲ್ಲಿ ಒಟ್ಟು 94 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 965 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಇಬ್ಬರು ಮೃತಪಟ್ಟಿದ್ದಾರೆ.
ಹೊರ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿದ ವಿಶೇಷ ಪ್ರವರ್ಗದ 60, ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ 22, ಶಂಕಿತ ರೋಗ ಲಕ್ಷಣಗಳಿರುವ 17, ಶೀತಜ್ವರವಿರುವ 8 ಮತ್ತು ತೀವ್ರ ಉಸಿರಾಟದ ತೊಂದರೆ ಇರುವ ಐದು ಜನರು ಸೇರಿ ಒಟ್ಟು 112 ಮಂದಿಯ ಗಂಟಲ ದ್ರವದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರದ್ದೂ ಸೇರಿ 267 ಮಂದಿಯ ವರದಿ ಕೋವಿಡ್ ಪರೀಕ್ಷಾ ಪ್ರಯೋಗಾಲಯದಿಂದ ಬರಲು ಬಾಕಿ ಇದೆ.
ವಿವಿಧ ಆಸ್ಪತ್ರೆಗಳ ಪ್ರತ್ಯೇಕಿತ ವಾರ್ಡ್‌ಗಳಲ್ಲಿ ತೀವ್ರ ಉಸಿರಾಟದ ತೊಂದರೆ ಹೊಂದಿರುವ 7 ಮತ್ತು ಶೀತಜ್ವರವಿರುವ ಮೂವರು ಹಾಗೂ ಶಂಕಿತ ರೋಗಲಕ್ಷಣಗಳಿರುವ ಒಬ್ಬರು ಒಟ್ಟು 11 ಜನ ದಾಖಲಾಗಿದ್ದಾರೆ. ಪ್ರಸ್ತುತ ಒಟ್ಟು 81 ಮಂದಿ ನಿಗಾದಲ್ಲಿದ್ದಾರೆ. ಒಟ್ಟು 741 ಮಂದಿ ಗೃಹ ದಿಗ್ಬಂಧನದಲ್ಲಿದ್ದಾರೆ. ಸದ್ಯ ಆಸ್ಪತ್ರೆ ದಿಗ್ಬಂಧನದಲ್ಲಿ ಯಾರೂ ಇಲ್ಲ ಎಂದು ಡಿಎಚ್‌ಒ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss