ಉಡುಪಿ: ಹೊರ ರಾಜ್ಯದಿಂದ ಉಡುಪಿ ಜಿಲ್ಲೆಗೆ ಆಗಮಿಸಿ ಸರಕಾರಿ ದಿಗ್ಬಂಧನ ಕೇಂದ್ರದಲ್ಲಿರುವವರು ಗದ್ದಲ ನಡೆಸಿದ ಘಟನೆ ನಗರದಲ್ಲಿ ಇಂದು ವರದಿಯಾಗಿದೆ.
ಉಡುಪಿಯ ಇಂದಿರಾನಗರದ ಹಾಸ್ಟೆಲ್ ನಲ್ಲಿ ದಿಗ್ಬಂಧನದಲ್ಲಿರುವವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ತಂದೆಯ ಅಪರಕ್ರಿಯೆಗೆ ಬಂದಾತ ಗದ್ದಲ ಮಾಡಿದ್ದು, ಮುಂಬೈನಿಂದ ಬಂದು 13 ದಿನ ಆಯ್ತು, ನಮ್ಮನ್ನು ಇಲ್ಲಿಂದ ಬಿಡಿ ಎಂದು ಗಲಾಟೆ ಮಾಡಿದ್ದಾನೆ.
ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಾರದೆ ದಿಗ್ಬಂಧನ ಕೇಂದ್ರದಿಂದ ಯಾರನ್ನೂ ಮನೆಗೆ ಹೋಗಲು ಬಿಡುವುದಿಲ್ಲ. ವರದಿ ಬರುವವರೆಗೆ ಕಾಯಲೇಬೇಕು ಎಂದು ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ. ಪೊಲೀಸರು ಕೂಡ ಇದನ್ನೇ ಹೇಳಿದ್ದಾರೆ.
ಸದ್ಯ ಉಡುಪಿ ಜಿಲ್ಲೆಯಲ್ಲಿ ಒಟ್ಟು 4540 ಮಂದಿಯ ಕೋವಿಡ್ ಪರೀಕ್ಷಾ ವರದಿಗಳು ಬರಲು ಬಾಕಿ ಇವೆ.