ಉಡುಪಿ: ನೆರೆ ನೀರಿನಲ್ಲಿ ತೋಯುತ್ತಿರುವ ಉಡುಪಿಯಲ್ಲಿ ನಿನ್ನೆ ಮೇಘಸ್ಪೋಟವಾಗಿದೆ! ಜಿಲ್ಲೆಯ ಎರಡು ಗ್ರಾಮಗಳಲ್ಲಿ 24 ತಾಸುಗಳ ಅವಧಿಯಲ್ಲಿ 54 ಸೆಂ.ಮೀ.ಗಿಂತಲೂ ಅಧಿಕ ಮಳೆಯಾಗಿದೆ.
ಜಿಲ್ಲೆಯ ಉಡುಪಿ ತಾಲೂಕಿನ ಬಡಾನಿಡಿಯೂರು ಗ್ರಾಮದಲ್ಲಿ 54.8 ಸೆಂ.ಮೀ. ದಾಖಲೆಯ ಮಳೆ ಸುರಿದರೆ, ಇನ್ನಂಜೆ ಗ್ರಾಮದಲ್ಲಿ 54.4 ಸೆಂ.ಮೀ. ಮಳೆ ಬಿದ್ದಿದೆ. ಐರೋಡಿ ಗ್ರಾಮದಲ್ಲಿ 44.9, ಕೋಡಿ ಗ್ರಾಮದಲ್ಲಿ 44.5, ಬೊಮ್ಮರಬೆಟ್ಟು ಗ್ರಾಮದಲ್ಲಿ 43.9, ಚಾಂತಾರುವಿನಲ್ಲಿ 43, ಮಣಿಪುರದಲ್ಲಿ 42.4, ಕಡೆಕಾರು 41.3, ಕೇರ್ವಾಶೆ 40.8, ಕುಂಜಾಲು 40.7, ಕೆಮ್ಮಣ್ಣು 40 ಸೆಂ.ಮೀ ಮಳೆಯಾಗಿದೆ. ಹಂದಾಡಿ ಗ್ರಾಮದಲ್ಲಿ 39.1, ಉದ್ಯಾವರ 38.5, ತೆಂಕನಿಡಿಯೂರು 38.2, ಮಲ್ಲಾರು 39.3, ಮಜೂರು 34.6, ಕೋಟೆ 39.9, ಕಟಪಾಡಿ 38.8 ಸೆಂ.ಮೀ. ಮಳೆ ಸುರಿದಿದೆ. ಉಡುಪಿ ಮತ್ತು ಕಾರ್ಕಳ ತಾಲೂಕಿನಲ್ಲಿ ವ್ಯಾಪಕವಾಗಿ ಮಳೆಯಾಗಿದೆ. ಕುಂದಾಪುರ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ.