Thursday, July 7, 2022

Latest Posts

ಉಡುಪಿ| ತೆಂಗು ಬೆಳಗಾರರಿಗೆ ತೀವ್ರ ಸಂಕಷ್ಟ: ಸರ್ಕಾರ ಬೆಂಬಲ ಬೆಲೆ ನೀಡಬೇಕು: ಜಿಲ್ಲಾ ಕೃಷಿಕ ಸಂಘ

ಉಡುಪಿ: ಜಿಲ್ಲೆಯಲ್ಲಿ ತೆಂಗು ಹೆಚ್ಚಾಗಿ ಎಲ್ಲ ರೈತರು ಬೆಳೆಯುತ್ತಿದ್ದು, ಪ್ರಸ್ತುತ ಕೊಬ್ಬರಿಗೆ ಬೇಡಿಕೆ ಇದ್ದರೂ ದರ ಕುಸಿತದಿಂದ ತೆಂಗು ಬೆಳಗಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಆದ್ದರಿಂದ ಸರ್ಕಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಿ ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಆಗ್ರಹಿಸಿದೆ.

ಲಾಕ್‌ಡೌನ್‌ನಿಂದಾಗಿ ತೊಂದರೆಗೀಡಾದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದರಿಂದ ಸಮಗ್ರವಾಗಿ ಅಲ್ಲದಿದ್ದರೂ ಕೆಲವು ವರ್ಗದ ಕೃಷಿಕರಿಗೆ ಪ್ರಯೋಜನವಾಗಲಿದೆ. ಆದರೆ ಅತೀ ಹೆಚ್ಚು ತೆಂಗು ಬೆಳೆಗಾರರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ.

ಬೇಡಿಕೆ ಇಲ್ಲದ ಕಾಲದಲ್ಲೂ ಕೊಬ್ಬರಿ ಕಿಲೋ ಒಂದರ ದರ 105 ರೂ. ಇದ್ದದ್ದು, ಈಗ ಏಕಾಏಕಿ 94 ರೂ.ಗೆ ಕುಸಿದಿದೆ. ಈ ದರ ಇನ್ನೂ ಇಳಿಕೆಯಾಗುವುದರಲ್ಲಿದೆ. ಆದ್ದರಿಂದ ರಾಜ್ಯ ಸರ್ಕಾರವು ತೆಂಗು ಬೆಳೆಗಾರರ ರಕ್ಷಣೆಗೆ ಮುಂದಾಗ ಬೇಕಿದೆ ಎಂದು ಜಿಲ್ಲಾ ಕೃಷಿಕ ಸಂಘವು ಮುಖ್ಯಮಂತ್ರಿ ಸಹಿತ ಜಿಲ್ಲೆಯ ಎಲ್ಲ ಶಾಸಕರನ್ನು ವಿನಂತಿಸಿದೆ.

ಸರಕಾರ ಕೊಬ್ಬರಿ ಕಿಲೋ ಒಂದಕ್ಕೆ ಕನಿಷ್ಠ 125 ರೂ. ಬೆಂಬಲ ಬೆಲೆ ಘೋಷಿಸುವುದಲ್ಲದೇ ಖರೀದಿಸುವ ವ್ಯವಸ್ಥೆಯನ್ನು ಕೂಡ ಶೀಘ್ರ ಮಾಡಬೇಕು ಎಂದು ಕೃಷಿಕ ಸಂಘವು ಒತ್ತಾಯಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss