Wednesday, July 6, 2022

Latest Posts

ಉಡುಪಿ| ದನದ ಕೊಟ್ಟಿಗೆಯಲ್ಲಿ 2 ಹೆಬ್ಬಾವು, 31 ಮೊಟ್ಟೆಗಳು ಪ್ರತ್ಯಕ್ಷ

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿಯಲ್ಲಿ ದನದ ಕೊಟ್ಟಿಗೆಯೊಂದರಲ್ಲಿ ಎರಡು ಹೆಬ್ಬಾವು ಮತ್ತು 31 ಮೊಟ್ಟೆಗಳು ಪತ್ತೆಯಾಗಿವೆ.

ಕಟಪಾಡಿ ವಿಶ್ವನಾಥ ಕ್ಷೇತ್ರ ಸಮೀಪ ರಾಮಚಂದ್ರ ಪೈ ಎಂಬವರ ಹಳೆಯ ಹಟ್ಟಿ ಕೊಟ್ಟಿಗೆಯಲ್ಲಿ ಒಂದು ಹೆಬ್ಬಾವು 16 ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಇದನ್ನು ಗಮನಿಸಿದ ರಾಮಚಂದ್ರ ಪೈ ಅವರು ಉರಗ ತಜ್ಞ ಮನು ಪೈ ಅವರಿಗೆ ವಿಷಯ ತಿಳಿಸಿದ್ದಾರೆ. ಮನು ಪೈ ಅವರು ಸ್ಥಳಕ್ಕಾಗಮಿಸಿದಾಗ ಅಲ್ಲೇ ಇನ್ನೊಂದು ಹೆಬ್ಬಾವು 15 ಮೊಟ್ಟೆಗಳಿಗೆ ಕಾವು ಕೊಡುತ್ತಿದ್ದುದು ಗಮನಕ್ಕೆ ಬಂದಿದೆ.

ಬಳಿಕ ಮನು ಪೈ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಮನು ಪೈ ಅವರು ಎರಡು ಹೆಬ್ಬಾವು ಮತ್ತು ಮೊಟ್ಟೆಗಳನ್ನು ಸುರಕ್ಷಿತವಾಗಿ ತೆಗೆದು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಅರಣ್ಯಾಧಿಕಾಗಳು ಮೊಟ್ಟೆ ಮತ್ತು ಹೆಬ್ಬಾವುಗಳನ್ನು ಪಿಲಾರು ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss