Monday, August 15, 2022

Latest Posts

ಉಡುಪಿ| ದಿಗ್ಬಂಧನದಿಂದ ಹೋದ 73 ಸೋಂಕಿತರನ್ನು ಮತ್ತೆ ಆಸ್ಪತ್ರೆಗೆ ಕರೆತರುವುದೇ ಜಿಲ್ಲಾಡಳಿತಕ್ಕೆಈಗಿರುವ ಸವಾಲು!

ಉಡುಪಿ: ಸರಕಾರದ ಪರಿಷ್ಕೃತ ಆದೇಶದಂತೆ ಹೊರ ರಾಜ್ಯದಿಂದ ಬಂದವರನ್ನು ದಿಗ್ಬಂಧನ ಕೇಂದ್ರದಿಂದ ಮನೆಗೆ ಬಿಟ್ಟಿರುವುದೇ ಜಿಲ್ಲಾಡಳಿತಕ್ಕೆ ಮುಳುವಾಗಿದೆ. ದಿಗ್ಬಂಧನದಿಂದ ಹೋದವರಲ್ಲೇ ಸೋಂಕು ಪತ್ತೆಯಾದರೂ ಇದೀಗ ಅವರ ವಿಳಾಸ ಪತ್ತೆ ಮಾಡುವುದೇ ಸವಾಲಾಗಿದೆ.
ಇಂದು ಪತ್ತೆಯಾದ 73 ಸೋಂಕಿತರು ದಿಗ್ಬಂಧನ ಕೇಂದ್ರದಲ್ಲಿದ್ದರು. ಆದರೆ ಅವರನ್ನು ಕೋವಿಡ್ ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಬರುತ್ತಿದ್ದಂತೆ ಅವರನ್ನು ಮತ್ತೆ ಆಸ್ಪತ್ರೆಗೆ ಕರೆತರುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 7ಸಾವಿರಕ್ಕೂ ಅಧಿಕ ಮಂದಿಯ ವರದಿ ಬಾಕಿಯಿದೆ. ಆದರೆ ಅವರನ್ನೆಲ್ಲ ಸರಕಾರದ ನಿಯಮಾವಳಿಯಂತೆ ಏಳು ದಿನ ದಿಗ್ಬಂಧನ ಪೂರೈಸಿದವರು ಮನೆಗೆ ತೆರಳಿದ್ದಾರೆ. ಸೋಂಕಿತರಲ್ಲಿ ಐವರ ಫೋನ್ ಸ್ವಿಚ್ ಆಫ್ ಆಗಿದೆ. ಅವರ ವಿಳಾಸ ಪತ್ತೆ ಮಾಡುವ ತಲೆಬಿಸಿಯಲ್ಲೀಗ ಜಿಲ್ಲಾಡಳಿತವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss