ಉಡುಪಿ| ದಿಗ್ಬಂಧನ ನಿಯಮ ಉಲ್ಲಂಘಿಸಿದ ತಂದೆ-ಮಗಳ ಮೇಲೆ ಕ್ರಿಮಿನಲ್ ಕೇಸು

0
518

ಉಡುಪಿ: ಜಿಲ್ಲಾಡಳಿತದ ಸೂಚನೆಯಂತೆ ದಿಗ್ಬಂಧನದಲ್ಲಿ ಇರದೇ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದ ತಂದೆ ಮತ್ತು ಮಗಳ ಮೇಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಾಗಿದೆ.

ಇಲ್ಲಿನ ವಿಜಯಲಕ್ಷ್ಮಿ ಲಾಡ್ಜ್ ನಲ್ಲಿ ಕೆಲವರನ್ನು ದಿಗ್ಬಂಧನದಲ್ಲಿ ಇಡಲಾಗಿತ್ತು. ಅವರಲ್ಲಿ ಇಬ್ಬರಿಗೆ ಬುಧವಾರ ಕೋರೋನಾ ಸೋಂಕು ಪತ್ತೆಯಾಗಿತ್ತು. ಆದ್ದರಿಂದ ಲಾಡ್ಜ್ ನ ಮೇಲ್ವಿಚಾರಕ ವಿಠಲ ಹೆಗ್ಡೆ ಮತ್ತು ಅವರ ಮಗಳು ತೃಪ್ತಿ ಹೆಗ್ಡೆ ಅವರನ್ನೂ ಲಾಡ್ಜ್ ನಲ್ಲಿ ದಿಗ್ಬಂಧನದಲ್ಲಿರಲು ಜಿಲ್ಲಾಧಿಕಾರಿ ಆದೇಶದಂತೆ ಹೇಳಲಾಗಿತ್ತು.

ಆದರೆ ಅವರು ನಾಡ್ಪಾಲು ಗ್ರಾಮದ ಸೀತಾನದಿಯಲ್ಲಿರುವ ಮನೆಗೆ ತೆರಳಿ, ಪರಿಸರದಲ್ಲಿ ತಿರುಗಾಡುತ್ತಿದ್ದರು. ಈ ಬಗ್ಗೆ ಆರೋಗ್ಯಾಧಿಕಾರಿಗಳು ತಿರುಗಾಡದೇ ದಿಗ್ಬಂಧನದಲ್ಲಿ ಇರುವಂತೆ ಸೂಚಿಸಿದ್ದರು. ಆದರೆ ಬುಧವಾರ ರಾತ್ರಿ 9.30ಕ್ಕೆ ಅಧಿಕಾರಿಗಳು ಹೋದಾಗ ತಂದೆ ಮಗಳು ಜಿಲ್ಲಾಧಿಕಾರಿ ಅದೇಶವನ್ನು ಉಲ್ಲಂಘಿಸಿ, ನಿರ್ಲಕ್ಷ್ಯದಿಂದ ತಿರುಗಾಡುತ್ತಿದ್ದರು. ಅವರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಇದ್ದುದರಿಂದ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here