Wednesday, August 17, 2022

Latest Posts

ಉಡುಪಿ: ಧರಾಶಾಹಿಯಾಯ್ತು ಹಳೇ ಬಹುಮಹಡಿ ಕಟ್ಟಡದ ಪಾರ್ಶ್ವ

ಉಡುಪಿ: ನಗರದ ಮಧ್ಯ ಭಾಗದಲ್ಲಿ ಬಹುಮಹಡಿ ಕಟ್ಟಡವೊಂದು ಶುಕ್ರವಾರ ಕುಸಿದಿದೆ. ಪರಿಣಾಮ ಪಾರ್ಶ್ವದ ಅಂಗಡಿಗಳಿಗೆ ಹಾನಿ ಸಂಭವಿಸಿದೆ.
ಉಡುಪಿ ನಗರದ ಚಿತ್ತರಂಜನ್ ವೃತ್ತದ ಸಮೀಪದ ಕಟ್ಟಡ ರಾಯಲ್ ಮಹಲ್‌ನ ಪಾರ್ಶ್ವ ಕುಸಿದ ಪರಿಣಾಮ ಅಂಗಡಿಗಳಿಗೆ ಹಾನಿ ಉಂಟಾಗಿದೆ. ರಾಯಲ್ ಮಹಲ್ ಎರಡು ಅಂತಸ್ತಿನ ಪುರಾತನ ಕಟ್ಟಡವಾಗಿದೆ. ಇದೀಗ ಪಾರ್ಶ್ವ ಮಾತ್ರ ಕುಸಿದಿದ್ದರೂ ಇಡೀ ಕಟ್ಟಡ ಕುಸಿಯುವ ಹಂತದಲ್ಲಿದೆ.
ಪಾರ್ಶ್ವ ಕುಸಿದ ಕಟ್ಟಡದಲ್ಲಿ ಭಾರತೀಯ ಜನ ಔಷಧಿ ಕೇಂದ್ರ, ಹೊಟೇಲ್, ಬೇಕರಿ ಸೇರಿದಂತೆ ಐದಾರು ಅಂಗಡಿಗಳಿವೆ. ಒಂದು ಭಾಗ ಕುಸಿಯುತ್ತಿದ್ದಂತೆ ತಳಮಹಡಿಯಲ್ಲಿದ್ದ ಅಂಗಡಿಗಳಲ್ಲಿದ್ದ ಸಿಬ್ಬಂದಿ ಹೊರಗೆ ಒಡಿ ಬಂದಿದ್ದಾರೆ. ಇದರಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿದೆ. ಉಡುಪಿ ಅಗ್ನಿಶಾಮಕ ದಳದಿಂದ ಮಣ್ಣು ತೆರವು ಕಾರ್ಯಚರಣೆ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!