Thursday, August 11, 2022

Latest Posts

ಉಡುಪಿ| ನಗರದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶವಿಲ್ಲ..!

ಉಡುಪಿ: ಇನ್ನು ಮುಂದೆ ಉಡುಪಿ ನಗರದಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ಅವಕಾಶವಿಲ್ಲ. ಎಲ್ಲರೂ ಆದಿ ಉಡುಪಿಯಲ್ಲಿರುವ ಎ.ಪಿ.ಎಂ.ಸಿ. ಆವರಣದಲ್ಲಿ ತಮ್ಮ ನಗರದ ವ್ಯಾಪಾರ ವಹಿವಾಟು ನಡೆಸಬೇಕಿದೆ.

ಉಡುಪಿ ನಗರದ ಎಲ್ಲ ರಸ್ತೆ ಬದಿ ವ್ಯಾಪಾರಿಗಳು ಮತ್ತು ರಸ್ತೆ ಬದಿ ವಾಹನಗಳಲ್ಲಿ ಹಣ್ಣು/ತರಕಾರಿ ಹಾಗೂ ರಖಂ (ಹೋಲ್ ಸೇಲ್) ವ್ಯಾಪಾರಿಗಳು ಜೂ. 4ರಿಂದ ತಮ್ಮ ಎಲ್ಲ ವ್ಯಾಪಾರ/ವಹಿವಾಟುಗಳನ್ನು, ನಗರದ ಆದಿ ಉಡುಪಿ ಬಳಿ ಇರುವ ಎ.ಪಿ.ಎಂ.ಸಿ. ಮಾರುಕಟ್ಟೆಗೆ ಸ್ಥಳಾಂತರಿಸುವುದು.

ಯಾವುದೇ ತರಕಾರಿ/ಹಣ್ಣು ಹಂಪಲು ವ್ಯಾಪಾರಸ್ಥರು ಎ.ಪಿ.ಎಂ.ಸಿ. ಮಾರುಕಟ್ಟೆಯ ಆವರಣವನ್ನು ಹೊರತುಪಡಿಸಿ, ನಗರದ ಯಾವುದೇ ಪ್ರದೇಶಗಳಲ್ಲಿ /ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದರೆ, ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಹಾಗೂ ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss