Wednesday, June 29, 2022

Latest Posts

ಉಡುಪಿ| ಪೆರ್ಡೂರು ಶ್ರೀಅನಂತಪದ್ಮನಾಭ ಕ್ಷೇತ್ರದಲ್ಲಿ ಸರಳವಾಗಿ ನಡೆಯಿತು ‘ಮದುಮಕ್ಕಳ ಹಬ್ಬ’

ಉಡುಪಿ: ಜಿಲ್ಲೆಯಲ್ಲಿ ನಡೆಯುವ ಶ್ರಾವಣ ಮಾಸದ ಮೊದಲ ಜಾತ್ರೆ, ಕದಳಿಪ್ರಿಯ ಪೆರ್ಡೂರು ಶ್ರೀಅನಂತಪದ್ಮನಾಭ ಕ್ಷೇತ್ರದ ‘ಮದುಮಕ್ಕಳ ಹಬ್ಬ’ ಸೋಮವಾರ ಸರಳವಾಗಿ ಜರಗಿತು.
ಸಿಂಹ ಸಂಕ್ರಮಣದ ದಿನ ಈ ಜಾತ್ರೆ ಅದ್ದೂರಿಯಾಗಿ ನಡೆಯುವುದು ಸಂಪ್ರದಾಯ. ಆಷಾಢ ತಿಂಗಳು ಕಳೆದು ಶ್ರಾವಣ ಮಾಸದ ಮೊದಲ ದಿನ, ಈ ವರ್ಷ ಹೊಸದಾಗಿ ಮದುವೆಯಾದ ವಧು, ಪತಿಯ ಜೊತೆಗೆ ಪೆರ್ಡೂರು ದೇವಸ್ಥಾನಕ್ಕೆ ಬರುವುದು ವಾಡಿಕೆ. ತವರುಮನೆಯಿಂದ ಪತಿಯ ಮನೆಗೆ ಹೋಗುವ ಮುನ್ನ ಈ ಕ್ಷೇತ್ರಕ್ಕೆ ಬಂದರೆ ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಎನ್ನುವುದು ನಂಬಿಕೆ.
ಈ ಹಿನ್ನೆಲೆಯಲ್ಲಿ ನಡೆಯುವ ಮದುಮಕ್ಕಳ ಜಾತ್ರೆ ಈ ಬಾರಿ ಮಾತ್ರ ಕಳೆಗುಂದಿತ್ತು. ಸಾಂಪ್ರದಾಯಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿತ್ತು. ದೇವರ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ಪ್ರದಕ್ಷಿಣೆ ತಂದು ಸಾಂಪ್ರದಾಯಿಕ ಪೂಜೆ ನಡೆಸಲಾಯಿತು.
ದೇವಸ್ಥಾನದ ಸಿಬ್ಬಂದಿ ಮತ್ತು ಬೆರಳೆಣಿಕೆಯ ಭಕ್ತರು ಮಾತ್ರ ಪೆರ್ಡೂರು ಜಾತ್ರೆಯ ವೇಳೆ ಹಾಜರಿದ್ದರು. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಅನಂತಪದ್ಮನಾಭ ದೇವರ ದರ್ಶನ ಪಡೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss