ಉಡುಪಿ: ಜಿಲ್ಲೆಯ ಜನತೆಗೆ ಸಿಹಿ ಸುದ್ದಿಯೊಂದು ಲಭಿಸಿದ್ದು, ಪಡುಬಿದ್ರಿ ಸಮೀಪದ ಎಂಡ್ಪಾಯಿಂಟ್ ಕಡಲತೀರಕ್ಕೆ ಅಂತಾರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಪ್ರಮಾಣ ಸಿಕ್ಕಿದೆ. ಈ ಮೂಲಕ ಪ್ರವಾಸೋದ್ಯಮದಲ್ಲಿ ಹೊಸ ದಿಶೆ ಮೂಡಿದೆ. ಮೊದಲ ಪ್ರಯತ್ನದಲ್ಲಿಯೇ ಈ ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರ ಸಿಕ್ಕಿರುವುದು ಎಲ್ಲರ ಸಂತಸವನ್ನು ಇಮ್ಮಡಿಗೊಳಿಸಿದೆ.
ಭಾರತದ 8 ಬೀಚ್ಗಳಿಗೆ ಬ್ಲೂ ಫ್ಲ್ಯಾಗ್
ಕರ್ನಾಟಕದಲ್ಲಿ ಎರಡು ಕಡಲಕಿನಾರೆಗಳಿಗೆ ಬ್ಲೂ ಫ್ಲ್ಯಾಗ್ ಮಾನ್ಯತೆ ಲಭಿಸಿದೆ. ಪಡುಬಿದ್ರೆಯ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡು ಕಡಲಕಿನಾರೆಗೂ ಈ ಪ್ರಮಾಣ ಪತ್ರ ಸಿಕ್ಕಿದೆ. ಇವುಗಳೊಂದಿಗೆ ಗುಜರಾತ್ನ ಡಿಯು, ಶಿವರಾಜ್ಪುರ, ಕೇರಳದ ಕಾಪಡ್, ಒರಿಸ್ಸಾ, ವಿಶಾಖಪಟ್ಟಣಂ ಮತ್ತು ಅಂಡಮಾನ್ನ ರಾಧಾನಗರ್ ಬೀಚ್ಗಳು ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಪಡೆದಿವೆ. ಡೆನ್ಮಾರ್ಕ್ನ ಸಂಸ್ಥೆಯು ಈ ಪ್ರಮಾಣಪತ್ರವನ್ನು ನೀಡುತ್ತದೆ. ಇದನ್ನು ಭಾರತ ಸಹಿತ 47 ರಾಷ್ಟ್ರಗಳು ಮಾನ್ಯ ಮಾಡಿವೆ.