Tuesday, June 28, 2022

Latest Posts

ಉಡುಪಿ: ಬೀಸಿದ ಭಾರೀ ಸುಂಟರಗಾಳಿಗೆ ಮನೆಯ ಹೆಂಚು ತಲೆ ಮೇಲೆ ಬಿದ್ದು ಇಬ್ಬರಿಗೆ ಗಾಯ

ಉಡುಪಿ: ಜಿಲ್ಲೆಯ ಕಾಪು ತಾಲೂಕಿನ ಎರಡು ಗ್ರಾಮಗಳಲ್ಲಿ ಬೀಸಿದ ಭಾರೀ ಸುಂಟರಗಾಳಿಗೆ ಮನೆಯ ಹೆಂಚು ತಲೆ ಮೇಲೆ ಬಿದ್ದು ಇಬ್ಬರು ಗಾಯಗೊಂಡ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಕಳತ್ತೂರು ಹಾಗೂ ಪಾದೂರು ಗ್ರಾಮಗಳಲ್ಲಿ ಬೆಳಗ್ಗೆ 7.30ರ ಸುಮಾರಿಗೆ ಭಾರೀ ಸುಂಟರಗಾಳಿ ಬೀಸಿದೆ. ಪರಿಣಾಮ ಪಾದೂರು ಗ್ರಾಮದ ಬಾಲಕೃಷ್ಣ ಮಡಿವಾಳ ಮತ್ತು ಮೂರ್ತಿ ಅವರ ಮನೆಯ ತಗಡು ಶೀಟುಗಳು ಸಂಪೂರ್ಣ ಹಾರಿ ಹೋಗಿವೆ. ಮನೆಯ ಹೆಂಚುಗಳು ಬಿದ್ದಿವೆ. ಮನೆಯಲ್ಲಿ ಎರಡು ಕುಟುಂಬಗಳು ವಾಸವಾಗಿವೆ. ಮನೆಯೊಳಗಿದ್ದ ಶ್ಯಾಮಲಾ ಮಡಿವಾಳ ಹಾಗೂ ಮೂರ್ತಿ ಎಂಬವರ ತಲೆ ಮೇಲೆ ಹೆಂಚು ಬಿದ್ದು ಗಾಯವಾಗಿದೆ. ಗಾಯಗೊಂಡವರಿಗೆ ಕಾಪು ಖಾಸಗಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ಕಳತ್ತೂರು ಗ್ರಾಮದಲ್ಲಿ ಮನೆಯೊಂದರ ಆವರಣ ಗೋಡೆ ಧರಾಶಾಹಿಯಾಗಿದೆ. ರಸ್ತೆ ಬದಿಯಲ್ಲಿದ್ದ ಗೂಡಂಗಡಿಯ ಮೇಲ್ಚಾವಣಿಯ ಸಿಮೆಂಟ್ ಶೀಟ್ ಹಾರಿ ಹೋಗಿದೆ.

ಸ್ಥಳಕ್ಕೆ ಪಾದೂರು ಗ್ರಾಮಲೆಕ್ಕಾಧಿಕಾರಿ ಕ್ಲಾರೆನ್ಸ್, ಪೊಲೀಸ್ ಸಿಬ್ಬಂದಿ ಅಂಡಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸುಂಟರಗಾಳಿಯಿಂದ ಲಕ್ಷಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ತಿ ಹಾನಿ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದೆ. ಮಜೂರು ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ರಾವ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ರಂಗಶೆಟ್ಟಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss