Monday, August 8, 2022

Latest Posts

ಉಡುಪಿ| ಮಂಗಳವಾರ ಪಾಸಿಟಿವ್ ಬಂದ ಎಲ್ಲಾ ಪ್ರಕರಣಗಳೂ ಮಹಾರಾಷ್ಟ್ರದಿಂದ ಬಂದವರದ್ದು: ಜಿಲ್ಲಾಧಿಕಾರಿ ಜಗದೀಶ್

ಉಡುಪಿ: ಇಲ್ಲಿಯವರೆಗೆ ಜಿಲ್ಲೆಯಲ್ಲಿ ನಮಗೆ 200-300 ವರದಿಗಳು ಮಾತ್ರ ಕೈಸೇರುತ್ತಿತ್ತು, ಈಗ ದಿನಕ್ಕೆ 2ಸಾವಿರದಷ್ಟು ವರದಿಗಳು ಬರುತ್ತಿವೆ. ಹಾಗಾಗಿ ಸಹಜವಾಗಿಯೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಯಾರೂ ಆತಂಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಅವರು ತಿಳಿಸಿದ್ದಾರೆ.

ಮಂಗಳವಾರ ಪಾಸಿಟಿವ್ ಬಂದ ಎಲ್ಲರೂ ಮಹಾರಾಷ್ಟ್ರದಿಂದ ಬಂದವರು. ಇವರಲ್ಲಿ 10ವರ್ಷ ಪ್ರಾಯದೊಳಗಿನ 9ಮಕ್ಕಳೂ ಸೇರಿದ್ದಾರೆ. ಜಿಲ್ಲೆಯ 345 ಸಕ್ರಿಯ ಸೋಂಕಿತರ ಪೈಕಿ ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇಬ್ಬರಿಗೆ ಮಾತ್ರ ತೀವ್ರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಈಗಾಗಲೇ 1120 ಸುಸಜ್ಜಿತ ಹಾಸಿಗೆಗಳ ವ್ಯವಸ್ಥೆ ಮಾಡಿದ್ದೇವೆ. ಹೊಸದಾಗಿ ಪಾಸಿಟಿವ್ ವರದಿ ಬಂದ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಅವರು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss