ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಉಡುಪಿ| ಮಕರ ಸಂಕ್ರಾಂತಿಯಂದೇ ಕೋವಿಡ್ ಲಸಿಕೆ ಆಗಮನ

ಹೊಸದಿಗಂತ ವರದಿ,ಉಡುಪಿ:

ಜಿಲ್ಲೆಯಲ್ಲಿ ಸಾಂಕ್ರಮಿಕ ವ್ಯಾಧಿ ಕೋವಿಡ್-19 ಹೊಡೆದೋಡಿಸಲು ಸಂಕ್ರಮಣ ಕಾಲ ಆರಂಭವಾಗಿದ್ದು, ಮಕರ ಸಂಕ್ರಾಂತಿಯಂದೇ ಕೋವಿಡ್ ನಿರೋಧ ಲಸಿಕೆ ಕೋವಿಶೀಲ್ಡ್ ಆಗಮಿಸಿದೆ.

ಒಟ್ಟು 12 ಸಾವಿರ ಡೋಸ್ ಕೋವಿಶಿಲ್ಡ್ ಹೊತ್ತ ಲಸಿಕಾ ವಾಹನ ಬುಧವಾರ ಮಧ್ಯಾಹ್ನ ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ತಲುಪಿತು. ಸದ್ಯ ಲಸಿಕೆಗಳನ್ನು ಸುರಕ್ಷಿತವಾಗಿ ಔಷಧ ದಾಸ್ತಾನು ಉಗ್ರಾಣದಲ್ಲಿ ಇರಿಸಲಾಗಿದೆ.

ಮಂಗಳೂರು ಸರಕಾರಿ ಔಷಧ ಉಗ್ರಾಣ ಕೇಂದ್ರದಿಂದ ಪೊಲೀಸ್ ಭದ್ರತೆಯಲ್ಲಿ ಲಸಿಕೆ ಉಡುಪಿ ಡಿಎಚ್ಒ ಕಚೇರಿಗೆ ತಲುಪಿದೆ. ಜಿಲ್ಲಾಧಿಕಾರಿ ಜಿ.ಜಗದೀಶ್, ಜಿ.ಪಂ ಸಿಇಒ ಡಾ. ನವೀನ್ ಭಟ್ ವೈ., ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಸುಧೀರಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್, ಡಾ. ಎಂ.ಜಿ. ರಾಮ, ಡಾ.ಪ್ರೇಮಾನಂದ ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss