ಉಡುಪಿ: ಮಣಿಪಾಲ ಎಂಐಟಿ ಭದ್ರತಾ ವಿಭಾಗ, ಮಣಿಪಾಲ ಕೆಎಂಸಿ ರಕ್ತನಿಧಿ ವಿಭಾಗದ ಜಂಟಿ ಸಹಕಾರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಕೆಎಂಸಿ ರಕ್ತನಿಧಿ ವಿಭಾಗದಲ್ಲಿ ನಡೆಯಿತು.ಎಂಐಟಿ ಮಣಿಪಾಲದ ನಿರ್ದೇಶಕ ಡಾ. ಶ್ರೀಕಾಂತ್ ರಾವ್ ಶಿಬಿರ ಉದ್ಘಾಟಿಸಿ, ಕೋವಿಡ್ ಲಾಕ್ಡೌನ್ನಿಂದಾಗಿ ಕೆಎಂಸಿ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಎಂಐಟಿ ಭದ್ರತಾ ವಿಭಾಗದ ಉದ್ಯೋಗಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿರುವುದು ಶ್ಲಾಘನೀಯ ಎಂದರು.
ಮಾಹೆ ಮಣಿಪಾಲದ ಕರ್ನಲ್ ಪ್ರಕಾಶ್ಚಂದ್ರ ಕೌಲ್, ಭದ್ರತಾ ಅಧಿಕಾರಿ ಅಶೋಕ್ ರಾವ್, ಮುಖ್ಯ ಭದ್ರತಾ ಅಧಿಕಾರಿ ರತ್ನಾಕರ ಸಾಮಂತ್, ಎಂಐಟಿಯ ಪ್ರಾಧ್ಯಾಪಕ ಪ್ರೊ. ಬಾಲಕೃಷ್ಣ ಮದ್ದೋಡಿ, ಉಚ್ಚಿಲ ದ.ಕ. ಮತ್ತು ಉಡುಪಿ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ರಕ್ತನಿಧಿ ವಿಭಾಗದ ಡಾ.ಅಶ್ವಿನ್, ರಕ್ತದ ಅಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಉಪಸ್ಥಿತರಿದ್ದರು.
ನವೀನ್ ತಿಂಗಳಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಮದಾಸ್ ಜತ್ತನ್ ವಂದಿಸಿದರು.