Tuesday, June 28, 2022

Latest Posts

ಉಡುಪಿ| ಮತ್ತೆ ಚುರುಕು ಪಡೆದ ವರುಣ: ಜಿಲ್ಲೆಯಲ್ಲಿ ಹಳದಿ ಅಲರ್ಟ್ ಘೋಷಣೆ

ಉಡುಪಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿತ್ತು. ಬುಧವಾರ ಮಧ್ಯಾಹ್ನದಿಂದ ಮತ್ತೆ ಚುರುಕು ಪಡೆದಿದೆ. ರಾಜ್ಯ ಹವಾಮಾನ ಮುನ್ಸೂಚನಾ ಕೇಂದ್ರ ಕೂಡ ಮುಂದಿನ 5 ದಿನಗಳ ಕಾಲ ಜಿಲ್ಲೆಯಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಿದೆ.
ಈ ಅವಧಿಯಲ್ಲಿ ಪ್ರತಿದಿನ ಬೆಳಗ್ಗೆ 8.30ಕ್ಕೆ ಕೊನೆಯಾಗುವ 24 ತಾಸುಗಳಲ್ಲಿ ಜಿಲ್ಲೆಯ ಪ್ರತ್ಯೇಕಿತ ಪ್ರದೇಶಗಳಲ್ಲಿ 65ರಿಂದ 115 ಮಿ.ಮೀ. ಮಳೆಯಾಗುವ ನಿರೀಕ್ಷೆ ಮಾಡಲಾಗಿದೆ. ಜು. 20ರ ಬೆಳಗ್ಗೆವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನಾ ಕೇಂದ್ರ ವರದಿ ನೀಡಿದೆ.
ಬುಧವಾರ ಹಗಲಿಡೀ ತುಂತುರು ಮಳೆಯಾಗಿತ್ತು. ಮಧ್ಯಾಹ್ನ ಬಳಿಕ ಮಳೆ ಸ್ವಲ್ಪ ಬಿರುಸು ಪಡೆದಿದ್ದರೆ, ಸಂಜೆಯ ನಂತರ ತೀವ್ರವಾಗಿದೆ. ಎಡೆಬಿಡದೇ ನಿರಂತರವಾಗಿ ಒಂದೇ ಸಮನೆ ಮಳೆ ಸುರಿಯುತ್ತಿದೆ. ಉಡುಪಿ, ಕಟಪಾಡಿ, ಮಣಿಪಾಲ, ಬ್ರಹ್ಮಾವರ, ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss