Monday, August 8, 2022

Latest Posts

ಉಡುಪಿ| ಮತ್ತೆ ಮೂರು ಕೋವಿಡ್, ಜಿಲ್ಲೆಯಲ್ಲಿ ಅಧಿಕೃತ ಸೋಂಕಿತರ ಸಂಖ್ಯೆ 50ಕ್ಕೇರಿಕೆ

ಉಡುಪಿ: ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ನೋವೆಲ್ ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಅಧಿಕೃತ ಸೋಂಕಿತರ ಸಂಖ್ಯೆ 50ಕ್ಕೇರಿದೆ. ಮಹಾರಾಷ್ಟ್ರದ ಮುಂಬೈನಿಂದ ಬಂದ ಮೂವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇಬ್ಬರು ಗಂಡು, ಓರ್ವ ಮಹಿಳೆಗೆ ಕೋವಿಡ್ – 19 ಸೋಂಕು ಪತ್ತೆಯಾಗಿದ್ದು, ಎಲ್ಲರೂ ಸರಕಾರಿ ದಿಗ್ಬಂಧನದಲ್ಲಿದ್ದರು.
ಬೈಂದೂರು ತಾಲೂಕಿನಲ್ಲಿ ದಿಗ್ಬಂಧನದಲ್ಲಿದ್ದ 31 ಮತ್ತು 55ರ ಹರೆಯದ ಇಬ್ಬರು ಪುರುಷರು ಹಾಗೂ 48 ವರ್ಷ ಪ್ರಾಯದ ಮಹಿಳೆಗೆ ಸೋಂಕು ಅಂಟಿದೆ. ಸೋಂಕಿತ ಮೂವರನ್ನು ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss