ಉಡುಪಿ: ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ ಏಳು ತಿಂಗಳ ಗರ್ಭಿಣಿಯಲ್ಲಿ ನೋವೆಲ್ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 11ಕ್ಕೇರಿದೆ.
ಪತಿಯೊಂದಿಗೆ ಊರಿಗೆ ಆಗಮಿಸಿದ ಗರ್ಭಿಣಿ ಕುಂದಾಪುರದಲ್ಲಿ ಸರಕಾರಿ ದಿಗ್ಬಂಧನದಲ್ಲಿದ್ದರು. ಗಂಡ- ಹೆಂಡತಿ ಇಬ್ಬರು ಜೊತೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ದಿಗ್ಬಂಧನದಲ್ಲಿದ್ದರು. ಗರ್ಭಿಣಿ ನಿಯಮಿತ ಪರೀಕ್ಷೆಗೆ ತೆರಳಿದಾಗ ಅಲ್ಲಿಯೇ ಕೋವಿಡ್ ಪರೀಕ್ಷೆಗೆ ಗಂಟಲ ದ್ರವ ಮಾದರಿಯನ್ನು ಪಡೆದು ಮಂಗಳೂರು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದೀಗ ಪರೀಕ್ಷಾ ವರದಿ ಬಂದಿದ್ದು, ಸೋಂಕು ಅಂಟಿರುವುದು ಖಚಿತವಾಗಿದೆ. ಸೋಂಕಿತೆಯ ಜೊತೆಯಲ್ಲಿದ್ದ ಪತಿಯ ಗಂಟಲ ದ್ರವ ಮಾದರಿಯನ್ನು ಇಂದು ಪಡೆದು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗುತ್ತದೆ.