Wednesday, August 17, 2022

Latest Posts

ಉಡುಪಿ| ಮೇ.18ರಿಂದ ಎಲ್ಲ ಸಲೂನ್ ಗಳು ಓಪನ್: ಜಿಲ್ಲಾಧಿಕಾರಿ ಜಿ. ಜಗದೀಶ ಷರತ್ತುಬದ್ಧ ಅನುಮತಿ

ಉಡುಪಿ: ಕೋವಿಡ್ -19 ವಿಪತ್ತಿನಿಂದ ಇಡೀ ವಿಶ್ವವೇ ತತ್ತರಿಸುತ್ತಿದ್ದು, ಭಾರತದಲ್ಲಿ ಲಾಕ್ ಡೌನ್ ಘೋಷಣೆ ಮಾಡುವ ಮೂರು ದಿನ ಮೊದಲೇ ಕ್ಷೌರಿಕ ಅಂಗಡಿಗಳನ್ನು ಮುಚ್ಚಲಾಗಿತ್ತು. ಇದೀಗ ಮೇ 18ರಿಂದ ಜಿಲ್ಲೆಯಲ್ಲಿ ಎಲ್ಲ ಸಲೂನ್ ಗಳನ್ನು ಪುನರಾರಂಭಿಸಲು ಜಿಲ್ಲಾಧಿಕಾರಿ ಜಿ. ಜಗದೀಶ ಷರತ್ತುಬದ್ಧ ಅನುಮತಿ ನೀಡಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಅವರನ್ನು ಉಡುಪಿ ಜಿಲ್ಲಾ ಸವಿತಾ ಸಮಾಜದ ನಿಯೋಗವು ಭೇಟಿ ಮಾಡಿ ಮನವಿ ಸಲ್ಲಿಸಿ, ಪರಿಸ್ಥಿತಿಯನ್ನು ವಿವರಿಸಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮೇ 18ರಿಂದ ಜಿಲ್ಲೆಯಾದ್ಯಂತ ಎಲ್ಲ ಸಲೂನ್ ಗಳನ್ನು ಪುನಃರಾರಂಭಿಸಲು ಷರತ್ತು ಬದ್ಧ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಭಾಸ್ಕರ್ ಭಂಡಾರಿ ಗುರುವಾರ ಸುದ್ದಿಗೋಷ್ಠಿ ಹೇಳಿದ್ದಾರೆ.

ಕಳೆದ 53 ದಿನಗಳಿಂದ ಸವಿತಾ ಸಮಾಜದ ಬಂಧುಗಳು ಸಮಸ್ಯೆಗಳ ನಡುವೆಯೂ ಬದುಕುತ್ತಿದ್ದಾರೆ. ಲಾಕ್ ಡೌನ್ ವೇಳೆ ಕ್ಷೌರಿಕರ ಕುಟುಂಬ ಸಂಕಷ್ಟಕ್ಕೆ ಸಿಲುಕಿದಾಗ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮೂಲಕ ಜಿಲ್ಲೆಯ ಎಲ್ಲ ಕ್ಷೌರಿಕ ಬಂಧುಗಳಿಗೆ ಹಾಗೂ ಬಡ ಅರ್ಹ ಕುಟುಂಬಕ್ಕೆ 2000 ಪಡಿತರ ಸಾಮಗ್ರಿ ಕಿಟ್ ನೀಡಿ ಮಾನವೀಯತೆಯನ್ನು ಮರೆದಿದ್ದಾರೆ. ಅಲ್ಲದೆ ಇತ್ತೀಚೆಗೆ ರಾಜ್ಯ ಸರಕಾರವು ಕ್ಷೌರಿಕರಿಗಾಗಿ 5000 ರೂ. ಆರ್ಥಿಕ ನೆರವು ಘೋಷಿಸಿದೆ. ಸರಕಾರವು ಸಂಬಂಧಪಟ್ಟ ಇಲಾಖೆಯ ಮೂಲಕ ಆದಷ್ಟು ತ್ವರಿತವಾಗಿ ಅರ್ಹ ಕ್ಷೌರಿಕರಿಗೆ ತಲುಪುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಸಲೂನ್ ಕಾರ್ಯಾಚರಣೆಗೆ ಷರತ್ತುಗಳು: ಗ್ರಾಹಕರು ಫೋನ್ ಮೂಲಕ ಸಮಯವನ್ನು ನಿಗದಿಪಡಿಸಿ ಕ್ಷೌರ ಮಾಡಿಸಲು ಬರಬೇಕು. ಯಾವುದೇ ಸಲೂನ್ ನಲ್ಲಿ ಎಸಿ ಬಳಸಬಾರದು. ಗ್ರಾಹಕರ ಮತ್ತು ಕ್ಷೌರಿಕರ ಅಂತರವನ್ನು 2ಅಡಿಗಳಿಗಿಂತ ಕಡಿಮೆ ಇರದಂತೆ ಕಾಪಾಡಬೇಕು.
ಸಲೂನ್ ನಲ್ಲಿರುವ ಬಟ್ಟೆ ಹಾಗೂ ಅಂಗಡಿಗಳು ಸ್ವಚ್ಛತೆ ಮತ್ತು ಶುಭ್ರತೆಯನ್ನು ಕಾಪಾಡಬೇಕು.

ಗ್ರಾಹಕರಿಗೆ ಸೇವೆ ನೀಡುವ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಗಳನ್ನು ಬಳಸಬೇಕು. ಗ್ರಾಹಕರಿಗೆ ಸೇವೆ ನೀಡಿದ ಬಳಕೆ ಸಾಬೂನಿನಲ್ಲಿ ಕೈ ತೊಳೆಯಬೇಕು. ಗ್ರಾಹಕರು ಬಂದ ತಕ್ಷಣ ಅವರಿಗೆ ಸ್ಯಾನಿಟೈಸರ್ ನಲ್ಲಿ ಕೈಯನ್ನು ಸ್ವಚ್ಛಗೊಳಸಲು ತಿಳಿಸುವುದು. ಅಂಗಡಿಯಲ್ಲಿ ಇಬ್ಬರು ಕ್ಷೌರಿಕರು ಸೇವೆ ನೀಡಬೇಕು. ಈ ಕುರ್ಚಿಗಳ ಅಂತರವೂ ಒಂದು ಮೀಟರ್ ಇರಬೇಕು. ಒಮ್ಮೆ ಒಬ್ಬ ಗ್ರಾಹಕರಿಗೆ ಬಳಸಿದ ಬಟ್ಟೆಗಳು ಮತ್ತೆ ಬೇರೆ ಗ್ರಾಹಕರಿಗೆ ಬಳಸುವಂತಿಲ್ಲ. ಆ ಬಟ್ಟೆಗಳನ್ನು ಒಗೆದ ಬಳಿಕವೇ ಉಪಯೋಗಿಸಬೇಕು.

ಸವಿತಾ ಸಮಾಜ ಈ ಹಿಂದಿನ ನಿಯಮದಂತೆ ವಾರದ ರಜೆ ಮಂಗಳವಾರ ಕಡ್ಡಾಯವಾಗಿರುತ್ತದೆ.
ಪ್ರತಿಯೊಬ್ಬ ಕ್ಷೌರಿಕನೂ ತನ್ನ ಮೊಬೈಲ್ ನಲ್ಲಿ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ್ ಸಾಲಿಯಾನ್, ಗೌರವಾಧ್ಯಕ್ಷ ಗೋವಿಂದ ಭಂಡಾರಿ, ಉಡುಪಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ. ಭಂಡಾರಿ ಕಿನ್ನಿಮೂಲ್ಕಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯು. ಶಂಕರ್ ಸಾಲಿಯಾನ್ ಕಟಪಾಡಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!