Monday, August 8, 2022

Latest Posts

ಉಡುಪಿ| ರಾಜ್ಯದಲ್ಲಿ ಸೋಂಕಿತ ವ್ಯಕ್ತಿ ಅನ್ಯ ಕಾರಣದಿಂದ ಮೃತಪಟ್ಟವರ ಸಂಖ್ಯೆ 2ಕ್ಕೇರಿಕೆ

ಉಡುಪಿ: ರಾಜ್ಯದಲ್ಲಿ ಕೋವಿಡ್-19 ಸೋಂಕಿತ ವ್ಯಕ್ತಿಯು ಕೋವಿಡ್ ಅಲ್ಲದೆ, ಅನ್ಯ ಕಾರಣದಿಂದ ಮೃತ ಪಟ್ಟವರ ಸಂಖ್ಯೆ ಎರಡಕ್ಕೇರಿದೆ.
ಉಡುಪಿ ಜಿಲ್ಲೆಯ ಕುಂದಾಪುರ ಮೂಲದ 54ರ ಹರೆಯದ ವ್ಯಕ್ತಿ ಮೇ 14ರಂದು ತೀವ್ರ ಹೃದಯಾಘಾತದಿಂದ ಮರಣ ಹೊಂದಿದ್ದಾರೆ. ಇದೀಗ ಎರಡು ದಿನಗಳ ನಂತರ ಅವರಿಗೆ ನೋವೆಲ್ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೊದಲ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ದಾಖಲಾಗಿದೆ. ಕಳೆದ ತಿಂಗಳ 16ರಂದು ವಿಜಯಪುರ ಜಿಲ್ಲೆಯ 42 ವರ್ಷ ಪ್ರಾಯದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮೂರು ದಿನಗಳ ಬಳಿಕ ಅವರಿಗೆ ಕೋವಿಡ್-19 ಸೋಂಕು ತಗುಲಿರುವುದು ಗೊತ್ತಾಗಿತ್ತು.
ಅಂದಹಾಗೆ ರಾಜ್ಯದಲ್ಲಿ ಈವರೆಗೆ ನೋವೆಲ್ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಕೊನೆಯುಸಿರೆಳೆದವರ ಸಂಖ್ಯೆ 36 ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss