Wednesday, July 6, 2022

Latest Posts

ಉಡುಪಿ| ಲಾಕ್‌ಡೌನ್ ಗೆ ಕಂಗಾಲಾಗಿದ್ದ ದೈವ ನರ್ತಕನ ಬಡ ಕುಟುಂಬಕ್ಕೆ ಈಗ ಗಾಯದ ಮೇಲೆ ಬರೆ…

ಉಡುಪಿ: ಹಿರಿಯ ದೈವ ನರ್ತಕ ಉಡುಪಿಯ ಸಾಧು ಪಾಣಾರ ಅವರ ಮನೆ ಶನಿವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಹಾನಿಗೊಳಗಾಗಿದೆ. ಇದರಿಂದ ಕೊರೋನಾ ಸೋಂಕು ಮಹಾಮಾರಿಯಿಂದಾಗಿ ಕುಲ ಕಸುಬು ಕೈ ತಪ್ಪಿ ಕಂಗಾಲಾಗಿದ್ದ ಈ ಬಡ ಕುಟುಂಬಕ್ಕೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ.
ಸುಮಾರು ಲಕ್ಷಕ್ಕೂ ಅಧಿಕ ಮೊತ್ತದ ನಷ್ಟ
ಕಾಪು ತಾಲೂಕಿನ ಅಲೆವೂರು ಗುಡ್ಡೆಯಂಗಡಿಯಲ್ಲಿ ಜಾನಪದ ಕಲಾವಿದ ಸಾಧು ಪಾಣಾರ ಅವರ ಮನೆಯ ಮೇಲ್ಚಾವಣಿ ಹಾರಿ ಹೋಗಿದೆ. ರಾತ್ರಿ 7.30ರ ಸುಮಾರಿಗೆ ಸುರಿದ ಧಾರಾಕಾರ ಮಳೆ ಮತ್ತು ಗಾಳಿಗೆ ಮನೆಯ ಛಾವಣಿ ಸಂಪೂರ್ಣವಾಗಿ ಹಾರಿ ಹೋಗಿದೆ. ಅದೃಷ್ಟವಶಾತ್ ಮನೆಯೊಳಗಿದ್ದ ಸಾಧು ಮತ್ತು ಅವರ ಪತ್ನಿಗೆ ಯಾವುದೇ ಅಪಾಯವಾಗಿಲ್ಲ. ಇದರಿಂದ ಸುಮಾರು ಲಕ್ಷಕ್ಕೂ ಅಧಿಕ ಮೊತ್ತದ ನಷ್ಟ ಅಂದಾಜಿಸಲಾಗಿದೆ.
ಬರಿದಾಗಿದೆ ಕಲಾವಿದರ ಅನ್ನದ ಬಟ್ಟಲು…
ಕರಾವಳಿಯಲ್ಲಿ ಫೆಬ್ರವರಿಯಿಂದ ಮೇ ತಿಂಗಳವರೆಗೆ ದೈವಗಳ ನೇಮ-ಕೋಲ ನಡೆಯುತ್ತದೆ. ದೈವ ನರ್ತಕರು ಈ ಅವಧಿಯಲ್ಲಿ ದುಡಿದ ಸಂಪಾದನೆಯಲ್ಲೇ ಇಡೀ ವರ್ಷ ಕಳೆಯುತ್ತಾರೆ. ಈ ವರ್ಷ ಇದೇ ಅವಧಿಯಲ್ಲಿ ಕೊರೋನಾ ಮಹಾಮಾರಿ ವಕ್ಕರಿಸಿದ್ದರಿಂದ ಎಲ್ಲ ಕೋಲ- ನೇಮಗಳು ರದ್ದಾಗಿ ಕಲಾವಿದರ ಅನ್ನದ ಬಟ್ಟಲು ಬರಿದಾಗಿದೆ.
ಇದೀಗ ಬೇಸಗೆ ಮಳೆಯಲ್ಲಿಯೇ ಕಿತ್ತು ಹೋಗಿರುವ ಮನೆಯ ಚಾವಣಿ ಸರಿ ಪಡಿಸಲು ಸಾಧು ಪಾಣಾರ ಅವರು ಪರಿತಪಿಸುವಂತಾಗಿದೆ. ಮುಂದಿನ ಮಳೆಗಾಲಕ್ಕೆ ಏನು ಮಾಡುವುದೆಂಬ ಚಿಂತೆಯಲ್ಲಿ ಈ ಬಡಕುಟುಂಬ ಕಣ್ಣೀರಿಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss