Tuesday, June 28, 2022

Latest Posts

ಉಡುಪಿ| ಲೋಕ ಕಲ್ಯಾಣಾರ್ಥವಾಗಿ ಕೊಲ್ಲೂರು ದೇವಳದಲ್ಲಿ ಚಂಡಿಕಾ ಯಾಗ

ಉಡುಪಿ: ಜಗತ್ತಿನಾದ್ಯಂತ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ವ್ಯಾಧಿ ನಿಯಂತ್ರಣಕ್ಕೆ ಬರಲು ಲೋಕ ಕಲ್ಯಾಣಾರ್ಥವಾಗಿ ಕೊಲ್ಲೂರು ದೇವಳದಲ್ಲಿ ಸೋಮವಾರ ಚಂಡಿಕಾ ಹವನ ನಡೆಯಿತು.

ಸೋಮವಾರದಿಂದ ಧಾರ್ಮಿಕ ಶ್ರದ್ಧಾ ಕೇಂದ್ರಗಳು, ದೇವಸ್ಥಾನಗಳು ತೆರೆದರೂ ಅಲ್ಲಿ ಯಾವುದೇ ಸೇವೆ ನೀಡಲು ಅವಕಾಶವಿಲ್ಲ ಎಂದು ಸರಕಾರ ಹೇಳಿದೆ. ಆದರೆ ಇಲ್ಲಿ ಭಕ್ತರು ಸೇವೆ ನೀಡಿಲ್ಲ, ಬದಲಾಗಿ ದೇವಸ್ಥಾನದ ಸಿಬ್ಬಂದಿಯೇ ಈ ಚಂಡಿಕಾ ಯಾಗದ ಸೇವೆ ಮಾಡಿಸಿದ್ದಾರೆ.

ದೇವಾಲಯದ ಸಿಬ್ಬಂದಿ ಲೋಕ ಕಲ್ಯಾಣಕ್ಕಾಗಿ ನಡೆಸಿದ ಸೇವಾ ರೂಪದ ಚಂಡಿಕಾ ಯಾಗದಲ್ಲಿ ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಸುತ್ತಗುಂಡಿ ಮೊದಲಾದವರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss