Sunday, August 14, 2022

Latest Posts

ಉಡುಪಿ| ವಿಪರೀತ ಮದ್ಯ ಸೇವನೆಯಿಂದ ಒಬ್ಬ ಸಾವು

ಉಡುಪಿ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ವಾರಂಬಳ್ಳಿ ಗ್ರಾಮದ ಮೂಡುಬಿರ್ತಿ ಎಂಬಲ್ಲಿ ನಿವಾಸಿ ದಿನೇಶ್ ಅವರು ವಿಪರೀತ ಮದ್ಯಪಾನ ಮಾಡಿ ಕೊನೆಯುಸಿರೆಳೆದಿದ್ದಾರೆ.

ಅವರು ಬುಧವಾರ ಬೆಳಗ್ಗೆ 9 ಗಂಟೆಗೆ ವಿಪರೀತ ಮದ್ಯ ಸೇವನೆಯಿಂದ ವಾಂತಿ ಮಾಡಿ ಮನೆಯ ಹಾಲ್ ನಲ್ಲಿ ಮಲಗಿದ್ದರು. ಸಂಜೆವರೆಗೂ ಏಳದೇ ಇದ್ದಾಗ ಮನೆಯವರು 6 ಗಂಟೆಗೆ ಎಬ್ಬಿಸಲು ನೋಡಿದಾಗ ಅವರು ಮಲಗಿದಲ್ಲಿಯೇ ಮೃತಪಟ್ಟಿದ್ದರು. ನಿತ್ಯ ಮದ್ಯಸೇವನೆ ಮಾಡುತ್ತಿದ್ದು, ಊಟ ಮಾಡದೇ ಇದ್ದುದರಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ ಎಂದು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss