ಉಡುಪಿ: ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ನಾಗನಬಾಕ್ಯಾರು ಎಂಬಲ್ಲಿ ವೃದ್ಧರೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಬು ಶೆಟ್ಟಿಗಾರ್ (85) ಆತ್ಮಹತ್ಯೆ ಮಾಡಿಕೊಂಡವರು. ಅವರು ಸುಮಾರು ವರ್ಷಗಳಿಂದ ಕೆಮ್ಮು ಉಬ್ಬಸದಿಂದ ಬಳಲುತ್ತಿದ್ದು, ಗುಣವಾಗದೇ ಜಿಗುಪ್ಸೆಗೊಂಡಿದ್ದರು. ಬೆಳಗ್ಗೆ 10.30ರ ಮೊದಲು ಮನೆಯಲ್ಲಿ ಯಾರು ಇಲ್ಲದಾಗ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.