Tuesday, June 28, 2022

Latest Posts

ಉಡುಪಿ| ಶಿವಧಾರಾ ಗೋಶಾಲೆಯಲ್ಲಿ ಗೋಪೂಜೆ: ಗೋರಕ್ಷಣಾ ನಿಧಿಗೆ ಚಾಲನೆ

ಹೊಸ ದಿಗಂತ ವರದಿ ಉಡುಪಿ

ಉಡುಪಿ: ಮಣಿಪಾಲದ ಸರಳೆಬೆಟ್ಟು ಶಿವಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನದ ಶಿವಧಾರಾ ಗೋಶಾಲೆಯಲ್ಲಿ ಗೋಪೂಜೆ ಜರಗಿತು. ಅಲ್ಲದೇ ಗೋಶಾಲೆಯ ಗೋರಕ್ಷಣಾ ನಿಧಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ ಅವರು, ತಮ್ಮ ಗೋಶಾಲೆಯಲ್ಲಿರುವ ಗೋವುಗಳ ಪಾಲನೆಯ ಉದ್ದೇಶದಿಂದ ಈ ನಿಧಿಯನ್ನು ಸ್ಥಾಪಿಸಲಾಗಿದೆ. ಪ್ರತೀ ವರ್ಷ 12ಸಾವಿರ ರೂ.ಗಳನ್ನು ನೀಡಿ ಒಂದು ಗೋವನ್ನು ವಾರ್ಷಿಕವಾಗಿ ದತ್ತು ತೆಗೆದುಕೊಳ್ಳುವ ಪರಿಕಲ್ಪನೆಯಿಂದ ಈ ಅಭಿಯಾನವನ್ನು ಆರಂಭಿಸಲಾಗಿದೆ ಎಂದರು.

ಸಮಾಜದಲ್ಲಿ ಹಲವಾರು ಜನರಿಗೆ ಗೋವುಗಳ ರಕ್ಷಣೆ ಮಾಡುವ ಆಸಕ್ತಿ, ಶಕ್ತಿ ಇದ್ದರೂ ಅವಕಾಶಗಳು ಮತ್ತು ಸಮಯದ ಅಭಾವದಿಂದ ಈ ಪವಿತ್ರ ಕಾರ್ಯದಿಂದ ವಂಚಿತರಾಗಿರುತ್ತಾರೆ. ಅಂತಹ ವ್ಯಕ್ತಿಗಳಿಗೆ ಈ ಮೂಲಕ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದವರು ಹೇಳಿದರು.

ಉದ್ಯಮಿ ಕಾರ್ತಿಕ್ ಕುಂದಾಪುರ ಒಂದು ಗೋವನ್ನು ದತ್ತು ತೆಗೆದು ಕೊಳ್ಳುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ದಿನೇಶ್ ಪ್ರಭು, ಟ್ರಸ್ಟಿಗಳಾದ ಕೃಷ್ಣರಾಯ ಪ್ರಭು, ಉದ್ಯಮಿ ಬಾಲಕೃಷ್ಣ ನಾಯಕ್, ಅರ್ಚಕ ಗೋಪಾಲಕೃಷ್ಣ ಶೆಣೈ, ಶ್ರೀಕಾಂತ್ ಪ್ರಭು ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss