Tuesday, June 28, 2022

Latest Posts

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಸಚಿವ ಜೆ.ಪಿ ಮಾಧುಸ್ವಾಮಿ ಕುಟುಂಬ

ಹೊಸದಿಗಂತ ವರದಿ, ಉಡುಪಿ

ಕರ್ನಾಟಕ ಸರಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಪಿ. ಮಾಧುಸ್ವಾಮಿ ಅವರು ಬುಧವಾರ ಸಕುಟುಂಬಿಕರಾಗಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು.

ಕನಕ ಕಿಂಡಿ ಹಾಗೂ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಪಡೆದರು. ಮಧ್ವ ಸರೋವರದಲ್ಲಿ ಗಂಗಾಪೂಜೆ ನಡೆಸಿದರು. ಬಳಿಕ ಪುರೋಹಿತರಾದ ಲಕ್ಷ್ಮೀಶಾಚಾರ್ಯ ಅವರಿಂದ ಪ್ರಸಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್, ವ್ಯವಸ್ಥಾಪಕ ಗೋವಿಂದ ರಾಜ್, ಪಿ.ಆರ್.ಒ. ಶ್ರೀಶ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss