ಉಡುಪಿ: ವಿದೇಶದಿಂದ ಬಂದ ಗರ್ಭಿಣಿಗೆ ಸಾಂಸ್ಥಿಕ ದಿಗ್ಬಂಧನದ ಅವಧಿ ಮುಗಿದರೂ ಅವರನ್ನು ಮನೆಗೆ ಕಳುಹಿಸಲಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ.
ದುಬೈನಿಂದ ಬಂದ ಗರ್ಭಿಣಿ ಲಾಡ್ಜ್ ನಲ್ಲಿ 15 ದಿನಗಳ ದಿಗ್ಬಂಧನವನ್ನು ಪೂರೈಸಿದ್ದಾರೆ. ಆದರೆ ಅವಧಿ ಮುಗಿದರೂ ಅವರನ್ನು ಇನ್ನೂ ಅಲ್ಲಿಯೇ ದಿಗ್ಬಂಧನ ಮುಂದುವರಿಸಲಾಗಿದೆ. ಜಿಲ್ಲಾಡಳಿತ ಒಂದೆಡೆ ಮನೆಗೆ ಕಳುಹಿಸದೇ ಇದ್ದರೆ, ಇನ್ನೊಂದೆಡೆ ಮನೆಯ ಅಹಾರಕ್ಕೂ ತಡೆ ನೀಡಿದೆ. ಇದರ ವಿರುದ್ಧ ಪ್ರಮೋದ್ ಮಧ್ವರಾಜ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದ ಬೇಜವಾಬ್ದಾರಿತನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಆಗ್ರಹಿಸಿದ್ದಾರೆ.