Tuesday, August 16, 2022

Latest Posts

ಉಡುಪಿ: ಹಾಡು ಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ

ಉಡುಪಿ: ಜಿಲ್ಲೆಯ ಹಿರಿಯಡ್ಕ ಸಮೀಪ ದುಷ್ಕರ್ಮಿಗಳ ತಂಡವೊಂದು ಹಾಡು ಹಗಲೇ ಯುವಕನೊಬ್ಬನನ್ನು ತಲವಾರಿನಿಂದ ಕೊಚ್ಚಿ ಹತ್ಯೆಗೈದಿದೆ.

ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳ ತಂಡ ಹತ್ಯೆ ನಡೆಸಿ ಪರಾರಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಹತ್ಯೆಯಾದವರು ಪಡುಬಿದ್ರಿ ಸಮೀಪದ ಕಿಶನ್ ಶೆಟ್ಟಿ (34) ಎಂದು ತಿಳಿದುಬಂದಿದೆ. ಮೃತ ಕಿಶನ್ ಶೆಟ್ಟಿ ಅವರು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಮಾತ್ರವಲ್ಲ ಅಪರಾಧಿ ಹಿನ್ನೆಲೆಯನ್ನೂ ಹೊಂದಿದ್ದರು.

ಇನ್ನೋವಾ ಮತ್ತು ರಿಟ್ಜ್ ಕಾರುಗಳಲ್ಲಿ ದುಷ್ಮರ್ಮಿಗಳು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಕತ್ತು ಕತ್ತರಿಸಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪೇಟೆಯ ಮಧ್ಯದಲ್ಲೇ ರಸ್ತೆಯಲ್ಲಿ ಕಿಶನ್ ಶೆಟ್ಟಿ ಶವ ಕವುಚಿ ಬಿದ್ದಿದೆ. ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದಾರೆ.

ಸ್ಥಳಕ್ಕೆ ಹಿರಿಯಡ್ಕ ಪೊಲೀಸರು ಭೇಟಿ ನೀಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss