Thursday, July 7, 2022

Latest Posts

ಉಡುಪಿ| ಹಾನಿ, ನಷ್ಟ , ಕಷ್ಟ ಕೊಟ್ಟು ಬಿರುಸು ತಗ್ಗಿಸಿದ ವರುಣ

ಉಡುಪಿ: ಕಳೆದ ಎರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬುಧವಾರ ಜಿಲ್ಲೆಯಲ್ಲಿ ಮಳೆ-ಬಿಸಿಲಿನ ವಾತಾವರಣವಿದೆ. ಆಗಾಗ್ಗೆ ಮೋಡ ಕವಿದು, ಮಳೆಯಾಗುತ್ತಿದ್ದರೆ, ಹೆಚ್ಚಿನ ಸಮಯ ಬಿಸಿಲು ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ 43 ಮಿ.ಮೀ. ಸರಾಸರಿ ಮಳೆಯಾಗಿದೆ.
ಬುಧವಾರ ಬೆಳಗ್ಗೆ 8.30ಕ್ಕೆ ಮುಕ್ತಾಯಗೊಂಡ 24 ತಾಸುಗಳಲ್ಲಿ ಸರಾಸರಿ 43 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 35.6 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 43.5 ಮಿ.ಮೀ. ಮತ್ತು ಕಾರ್ಕಳ ತಾಲೂಕಿನಲ್ಲಿ 50 ಮಿ.ಮೀ. ಮಳೆ ಸುರಿದಿದೆ. ಇದೇ ಅವಧಿಯಲ್ಲಿ ಕೋಣಿ ಗ್ರಾಮದಲ್ಲಿ ಅತಿ ಹೆಚ್ಚು 98 ಮಿ.ಮೀ. ಮಳೆ ದಾಖಲಾಗಿದೆ. ಯಡ್ತರೆಯಲ್ಲಿ 85 ಮಿ.ಮೀ., ಮಿಯ್ಯಾರಿನಲ್ಲಿ 77 ಮಿ.ಮೀ. ಮಳೆ ಬಿದ್ದಿದೆ.
ಇಂದು-ನಾಳೆ ಜಿಲ್ಲೆಯಲ್ಲಿ ಹಳದಿ ಅಲರ್ಟ್
ಉಡುಪಿ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದು, ಎರಡು ದಿನ ಸಾಧಾರಣ ಮಳೆಯಾಗುವ ನಿರೀಕ್ಷೆಯಲ್ಲಿ ಹವಾಮಾನ ಇಲಾಖೆಯು ಮುನ್ಸೂಚನಾ ವರದಿಯಲ್ಲಿ ಹಳದಿ ಅಲರ್ಟ್ ಘೋಷಿಸಿದೆ. ಅರಬ್ಬಿ ಸಮುದ್ರದಲ್ಲಿ ಪ್ರತೀ ತಾಸಿಗೆ 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.
ನಾಲ್ಕು ಮನೆಗಳಿಗೆ 7.41ಲಕ್ಷ ರೂ. ನಷ್ಟ
ಮಂಗಳವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ ಒಂದು ಮನೆ ಸಂಪೂರ್ಣ ಹಾನಿಯಾದರೆ, ಮೂರು ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಇದರಿಂದ 7.41ಲಕ್ಷ ರೂ. ನಷ್ಟವಾಗಿದೆ. ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಲಕ್ಷ್ಮೀ ದೇವಾಡಿಗ ಅವರ ಮನೆಯ ಗೋಡೆಗಳಿಗೆ ತೇವಾಂಶ ಬಂದು ಸಂಪೂರ್ಣ ಕುಸಿದಿವೆ. ಇವರಿಗೆ 5ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಅದೇ ಗ್ರಾಮದ ಶಾರದ ಅವರ ಮನೆ ಭಾಗಶಃ ಹಾನಿಯಾಗಿ 60ಸಾವಿರ ರೂ., ಹೊಳೆ ಗ್ರಾಮದ ಮೇರಿ ಅವರ ಮನೆಗೆ 1ಲಕ್ಷ ರೂ. ಮತ್ತು ಮರವಂತೆ ಗ್ರಾಮದ ಶಾಂತಾ ಅವರಿಗೆ 81ಸಾವಿರ ರೂ. ನಷ್ಟ ಉಂಟಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss