Wednesday, August 17, 2022

Latest Posts

ಉಡುಪಿ: 9 ಕುಟುಂಬಗಳಿಗೆ ಇಂದು ಪರಿಹಾರ ಧನದ ಚೆಕ್ ವಿತರಣೆ

ಉಡುಪಿ: ಈಚೆಗೆ ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕು ವ್ಯಾಪ್ತಿಯ 9 ಕುಟುಂಬಗಳಿಗೆ ಇಂದು ಪರಿಹಾರ ಧನದ ಚೆಕ್ ಗಳನ್ನು ಬ್ರಹ್ಮಾವರದ ಶಾಸಕರ ಕಚೇರಿಯಲ್ಲಿ ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.
ವಾರಂಬಳ್ಳಿ ಗ್ರಾಮದ ರಂಜನ್ ಅವರಿಗೆ 39,942 ರೂ., ಅರುಣಾ ಶೆಟ್ಟಿಗಾರ್ ಅವರಿಗೆ 11ಸಾವಿರ ರೂ., ಹೇರೂರು ಗ್ರಾಮದ ಸುಶೀಲಾ ಶೆಡ್ತಿ ಅವರಿಗೆ 55ಸಾವಿರ ರೂ., ಹಾರಾಡಿ ಗ್ರಾಮದ ಜಯಂತಿ ಅವರಿಗೆ 22ಸಾವಿರ ರೂ., ಆನಂದ ಅಮೀನ್ ಅವರಿಗೆ 24,726 ರೂ., ಚೇರ್ಕಾಡಿ ಗ್ರಾಮದ ಯಶೋದಾ ಅವರಿಗೆ 20ಸಾವಿರ ರೂ., ಕಳ್ತೂರು ಗ್ರಾಮದ ಸುಶೀಲಾ ಅವರಿಗೆ 39,942 ರೂ., ಉಪ್ಪೂರು ಗ್ರಾಮದ ಪೀಟರ್ ಡಿಸೋಜ ಅವರಿಗೆ 35ಸಾವಿರ ರೂ., ರಾಘವೇಂದ್ರ ರಾವ್ ಅವರಿಗೆ 35ಸಾವಿರ ರೂ. ಸೇರಿದಂತೆ 9 ಕುಟುಂಬಗಳಿಗೆ ಒಟ್ಟು 2,80,610 ರೂ. ಮೊತ್ತದ ಚೆಕ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು, ಚಾಂತಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಉದಯ ಕಾಮತ್, ಉಪ್ಪೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಿತ್ಯಾನಂದ, 38ನೇ ಕಳ್ತೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಮಾಕಾಂತ್ ಕಾಮತ್ ಮತ್ತು ಬ್ರಹ್ಮಾವರ ತಾಲೂಕು ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!