ಹೊಸ ದಿಗಂತ ಆನ್ಲೈನ್ ಡೆಸ್ಕ್:
ರೋಮಿಯೋದ ಪೋಂಪೈ ಪ್ರದೇಶದಲ್ಲಿ ಉತ್ಖನನ ನಡೆಸುತ್ತಿದ್ದ ಪುರಾತ್ವ ಇಲಾಖೆಯ ಸಿಬ್ಬಂದಿಗಳಿಗೆ ಎರಡು ಶವಗಳು ಪತ್ತೆಯಾಗಿ ಅಚ್ಚರಿ ಮೂಡಿಸಿವೆ.
ಶವ ಪತ್ತೆಯಾದರೆ ಅಚ್ಚರಿ ಯಾಕೆ ಎಂದು ಕೇಳುತ್ತೀರಾ? ಉತ್ತರ ಇಲ್ಲಿದೆ ಮುಂದೆ ಓದಿ…
ಈ ಶವಗಳು ಇಂದು ನಿನ್ನೆಯದ್ದೋ, ವಾರ, ತಿಂಗಳುಗಳ ಹಿಂದಿದ್ದೋ ಅಲ್ಲ. ಇದು ಬರೋಬ್ಬರಿ ಎರಡು ಸಾವಿರ ವರ್ಷ ಹಿಂದಿನದ್ದು.
ಪೊಂಪೈನ ಮಧ್ಯಭಾಗದಿಂದ 700 ಮೀಟರ್ ದೂರದಲ್ಲಿರುವ ಸಿವಿಟಾ ಎಂಬ ಹಳ್ಳಿಯಲ್ಲಿ ಈ ಶವಗಳು ಪತ್ತೆಯಾಗಿದ್ದು, ಇದು ಇಲ್ಲಿ ಹಿಂದೆ ನಡೆದಿದ್ದ ಜ್ವಾಲಾಮುಖಿ ಸ್ಫೋಟದಲ್ಲಿ ಸಾವನ್ನಪ್ಪಿದವರ ಶವ ಎಂದು ಖಚಿತಪಡಿಸಲಾಗಿದೆ.
ಎರಡು ಶವಗಳ ಪೈಕಿ ಒಂದು 30ರಿಂದ 40ವರ್ಷ ವಯಸ್ಸಿನ ವ್ಯಕ್ತಿಯದ್ದಾಗಿದ್ದರೆ, ಇನ್ನೊಂದು 18 ರಿಂದ 23 ವರ್ಷ ಆಸುಪಾಸಿನ ವ್ಯಕ್ತಿಯದ್ದು. ಶವದ ಬಟ್ಟೆಬರೆಗಳ ಕುರುಹನ್ನು ಆಧರಿಸಿ ಶ್ರೀಮಂತ ವ್ಯಕ್ತಿ ಹಾಗೂ ಆತನ ಸಹಾಯಕ ಇರಬಹುದು ಎಂದು ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ಈ ಬೆಳವಣಿಗೆ ಅಚ್ಚರಿಗೆ ಕಾರಣವಾಗಿದ್ದು, ಆಕಾಲದ ಕೆಲವೊಂದು ವಿಚಾರಗಳ ಬಗ್ಗೆ ಇದು ಬೆಳಕು ಚೆಲ್ಲಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ.