Monday, July 4, 2022

Latest Posts

ಉತ್ತಮ ಶಿಕ್ಷಣಕ್ಕೆ ಕಾಶ್ಮೀರದಲ್ಲಿ 25 “ಸ್ಮಾರ್ಟ್ ಸ್ಕೂಲ್” ನಿರ್ಮಿಸಿದ ಸರ್ಕಾರ.!

ಶ್ರೀನಗರ: ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರ 25 ಮಾದರಿ ಶಾಲೆಗಳನ್ನು ಜನವರಿ 19ರಂದು ಪ್ರಾರಂಭಿಸಿದೆ.

ಹೊಸದಾಗಿ ಪ್ರಾರಂಭವಾಗಿರುವ ಈ ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕೆ ಬೇಕಾಗಿರುವ ಗ್ರಂಥಾಲಯ,ವಿಜ್ಞಾನ ಪ್ರಯೋಗಾಲಯಗಳು, ಆಧುನಿಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಶಾಲೆ ಕಟ್ಟವನ್ನು ನವೀಕರಣಗೊಳಿಸುವುದರ ಮೂಲಕ ಮಕ್ಕಳಿಗೆ ಶಾಲೆಗೆ ಬರಲು ಉತ್ತೇಜಿಸುವ ಕೆಲಸವನ್ನು ಸರ್ಕಾರ ಮಾಡಿರುವುದಾಗಿ ವರದಿಯಾಗಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಶಾಲೆಯ ಬಾಲಕ ಮಹ್ರೀನ್ ಭಟ್ “ನಾನು ಇದುವರೆಗೂ ಈ ರೀತಿಯಾದಂತಹ ಆಧಿನಿಕ ಬೋರ್ಡ್ ಗಳನ್ನು ಮತ್ತು ಪ್ರೊಜೆಕ್ಟರ್ ಗಳನ್ನು ನಾವು ಕಾಶ್ಮೀರದ ಖಾಸಗಿ ಶಾಲೆಗಳಲ್ಲಿಯೂ ನೋಡಿಲ್ಲ. ಶಾಲೆಯಲ್ಲಿ ಉತ್ತಮ ವಾತಾವರಣವಿರದ್ದು ನಾವು ಉತ್ತಮ ಶಿಕ್ಷಕರನ್ನು ಹೊಂದಿದ್ದೇವೆ” ಎಂದು ಹೇಳಿದನು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss