ಹೊಸದಿಗಂತ ಆನ್ಲೈನ್ ಡೆಸ್ಕ್:
ಉತ್ತರಪ್ರದೇಶದ ಪಂಚನೇಲಿಯಲ್ಲಿ ರೈತ ಚಳಿಗೆ ಮೃತಪಟ್ಟಿದ್ದಾರೆ.
ರಾಮ್ ಕಿಶೋರ್ ಗದ್ದೆಯಲ್ಲಿ ಕೆಲಸ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ರಾಮ್ ಕಿಶೋರ್ ಅವರ ಪುತ್ರ ಸುಶೀಲ್ ಹೇಳಿದ್ದಾರೆ.
ಅತಿಯಾದ ಚಳಿಯಿಂದಾಗಿ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ.