Sunday, June 26, 2022

Latest Posts

ಉತ್ತರಾಖಂಡದಲ್ಲಿ ಹಿಮಸ್ಫೋಟ: ನಾಪತ್ತೆಯಾದವರ ರಕ್ಷಣೆಗಾಗಿ ಡ್ರೋನ್‌, ರಿಮೋಟ್ ಸೆನ್ಸಿಂಗ್ ಸಾಧನಗಳ ಬಳಕೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಉತ್ತರಾಖಂಡದಲ್ಲಿ ಸಂಭವಿಸಿದ ಹಿಮಸ್ಫೋಟದಿಂದ ಅನೇಕ ಜನರು ಸಾವನ್ನಪ್ಪಿದ್ದು, 25-35 ಜನರು ರಕ್ಷಿಸಲಾಗಿದೆ. ಇನ್ನು170 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಅವರೆಲ್ಲರೂ ಬದುಕುಳಿದಿರುವ ಭರವಸೆಯಲ್ಲೇ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಹಲವರ ರಕ್ಷಣೆಗಾಗಿ ಡ್ರೋನ್‌ಗಳು ಮತ್ತು ರಿಮೋಟ್ ಸೆನ್ಸಿಂಗ್ ಸಾಧನಗಳನ್ನು ಬಳಸಿಕೊಂಡು ರಕ್ಷಣಾ ತಂಡಗಳು ಬುಧವಾರ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
ಚಮೋಲಿ ಜಿಲ್ಲೆಯ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಈವರೆಗೆ ವಿವಿಧ ಸ್ಥಳಗಳಲ್ಲಿ 32 ಶವಗಳು ಪತ್ತೆಯಾಗಿವೆ. ಈ ಪೈಕಿ ಎಂಟು ಶವಗಳನ್ನು ಗುರುತಿಸಲಾಗಿದ್ದು, ಇನ್ನೂ 174 ಜನರು ಕಾಣೆಯಾಗಿದ್ದಾರೆ ಎಂದು ಡೆಹರಾಡೂನ್‌ನ ರಾಜ್ಯ ತುರ್ತು ನಿಯಂತ್ರಣ ಕೇಂದ್ರ ತಿಳಿಸಿದೆ.
ನಾಪತ್ತೆಯಾದವರಲ್ಲಿ ಎನ್‌ಟಿಪಿಸಿಯ 480 ಮೆಗಾವ್ಯಾಟ್ ತಪೋವನ-ವಿಷ್ಣುಗಡ ಯೋಜನೆ ಮತ್ತು 13.2 ಮೆಗಾವ್ಯಾಟ್‌ನ ರಿಷಿಗಂಗಾ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುವವರು ಮತ್ತು ಪ್ರವಾಹದಲ್ಲಿ ಕೊಚ್ಚಿಹೋಗಿರುವ ಸ್ಥಳೀಯ ಮನೆಗಳ ಗ್ರಾಮಸ್ಥರು ಸೇರಿದ್ದಾರೆ.
‘ಈ ಸಮಯದಲ್ಲಿ ಡ್ರೋನ್‌ಗಳು ಮತ್ತು ದೂರ ಸಂವೇದಿ ಉಪಕರಣಗಳು ಸೇರಿದಂತೆ ನಮ್ಮ ಬಳಿಯಿರುವ ಎಲ್ಲಾ ಸಂಪನ್ಮೂಲಗಳ ಸಹಾಯದಿಂದ ಸುರಂಗದೊಳಗೆ ಸಿಕ್ಕಿಬಿದ್ದವರನ್ನು ರಕ್ಷಿಸುವತ್ತ ಗಮನ ಹರಿಸಲಾಗಿದೆ’ ಎಂದು ಉತ್ತರಾಖಂಡ ಪೊಲೀಸ್ ಮುಖ್ಯ ವಕ್ತಾರ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ನಿಲೇಶ್ ಆನಂದ್ ಭರ್ನೆ ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss