ಹೊಸದಿಗಂತ ಆನ್ ಲೈನ್ ಡೆಸ್ಕ್:
ಉತ್ತರಾಖಂಡದಲ್ಲಿ ನಿನ್ನೆ ಉಂಟಾದ ಹಿಮನದಿ ಸ್ಫೋಟದಿಂದ 18 ಜನರ ಶವಗಳು ಪತ್ತೆಯಾಗಿದ್ದು, 27 ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ತಪೋವನ್ನಲ್ಲಿ ಕನಿಷ್ಠ 30 ಕಾರ್ಮಿಕರನ್ನು ರಕ್ಷಿಸಲು ಅನೇಕ ಏಜೆನ್ಸಿಗಳು ಕೈಜೋಡಿಸಿದ್ದರೂ ಸಹ, ಈ ಪೈಕಿ 12 ಅನ್ನು ತಪೋವನ್-ವಿಷ್ಣುಗಡ್ ಯೋಜನಾ ಸ್ಥಳದಲ್ಲಿ ಎರಡು ಸುರಂಗಗಳಲ್ಲಿ ಚಿಕ್ಕದರಿಂದ ಮತ್ತು 15 ರಿಷಿ ಗಂಗಾ ತಾಣದಿಂದ ಉಳಿಸಲಾಗಿದೆ.
ನಂದಾ ದೇವಿ ಹಿಮನದಿಯ ಒಂದು ಭಾಗದಲ್ಲಿ ಉಂಟಾದ ಹಿಮಪಾತದಿಂದಾಗಿ ಜೋಶಿಮಠದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಘಟನೆಯಲ್ಲಿ 125 ಮಂದಿ ಕಣ್ಮರೆಯಾಗಿದ್ದರು. ಇದೀಗ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಸದ್ಯ ಕಾಣೆಯಾಗಿದ್ದವರಲ್ಲಿ ಇನ್ನೂ ಸುಮಾರು 200 ಜನರು ಪತ್ತೆಯಾಗಬೇಕಿದ್ದು, ಇವರಲ್ಲಿ ವಿದ್ಯುತ್ ಯೋಜನೆಯ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದವರು ಮತ್ತು ಪ್ರವಾಹಕ್ಕೆ ಕೊಚ್ಚಿಹೋಗಿದ್ದ ಮನೆಗಳಲ್ಲಿದ್ದ ಸ್ಥಳೀಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೋಶಿಮಠದ ಸಮೀಪ ವಿಪತ್ತು ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸೇನೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಂಡಗಳು ಪಾಲ್ಗೊಂಡಿವೆ. 30 ರಿಂದ 35 ಜನರು ತಪೋವನ-ವಿಷ್ಣುಗಡ ಯೋಜನೆಯಲ್ಲಿ ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆಂದು ಆತಂಕ ವ್ಯಕ್ತಪಡಿಸಿದ್ದಾರೆ.