Wednesday, July 6, 2022

Latest Posts

ಉತ್ತರಾಖಂಡದ ಚಮೋಲಿಯಲ್ಲಿ ಮತ್ತೊಂದು ಸುತ್ತಿನ ಜಲ ಗಂಡಾಂತರ?

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಇತ್ತೀಚೆಗಷ್ಟೇ ನಿರ್ಗಲ್ಲ ಸ್ಫೋಟ ಸಂಭವಿಸಿ ಜಲಪ್ರಳಯಕ್ಕೆ ಕಾರಣವಾದ ಉತ್ತರಾಖಂಡದ ಚಮೋಲಿಯಲ್ಲಿ ಮತ್ತೊಂದು ಸುತ್ತಿನ ಜಲ ಗಂಡಾಂತರ ಘಟಿಸಲಿದೆಯೇ?

ಹೀಗೊಂದು ಆಘಾತಕಾರಿ ಮುನ್ಸೂಚನೆ ಹೊರಬಿದ್ದಿದೆ. ಈಗಾಗಲೇ ಋಷ್ಯಗಂಗಾ ಸಮೀಪ ಹಠಾತ್ ಸರೋವರವೊಂದು ಸೃಷ್ಟಿಯಾಗಿದೆ. ಈಗಾಗಲೇ ಪ್ರವಾಹದಲ್ಲಿ ತೇಲಿ ಬಂದಿರುವ ಅವಶೇಷಗಳು ಸೇರಿ ಈ ಸರೋವರ ನಿರ್ಮಾಣವಾಗಿರುವುದು ಉಪಗ್ರಹ ಚಿತ್ರಗಳಿಂದ ಕೂಡಾ ಖಚಿತವಾಗಿದೆ.

ಈ ಸರೋವರ 350 ಮೀ. ಉದ್ದ, 60 ಮೀ. ಎತ್ತರ ಮತ್ತು 10 ಡಿಗ್ರಿಗಳಷ್ಟು ಇಳಿಜಾರಿನಂತೆ ಕಾಣುತ್ತಿದೆ ಎಂದು ಕೇಂದ್ರ ಜಲ ಆಯೋಗ ಟ್ವೀಟ್ ಮಾಡಿದೆ. ಇದು ನದಿ ನೀರಿನ ಹರಿವಿಗೆ ತಡೆಯಾಗಿದ್ದು, ಇದು ಮುಂದಿನ ದಿನಗಳಲ್ಲಿ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಕೇಂದ್ರ ಜಲ ಆಯೋಗ ಟ್ವೀಟ್ ಮಾಡಿದೆ.

ಈ ನಡುವೆ ಪ್ರತಿಕ್ರಿಯಿಸಿರುವ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್, ರಾಜ್ಯ ಸರಕಾರ ಇಲ್ಲಿನ ಫೋಟೋಗಳನ್ನು ಪರಿಶೀಲಿಸುತ್ತಿದೆ. ಈಗಾಗಲೇ ಹೆಲಿಕಾಪ್ಟರ್‌ಗಳಲ್ಲಿ ವಿಜ್ಞಾನಿಗಳನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ಅವರು ಪರಿಶೀಲಿಸಿ ವರದಿ ನೀಡಲಿದ್ದಾರೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss