ಹೊಸದಿಗಂತ ಆನ್ ಲೈನ್ ಡೆಸ್ಕ್:
ಜಲಪ್ರಳಯಕ್ಕೆ ತುತ್ತಾಗಿರುವ ಉತ್ತಾರಾಖಂಡ್ನ ಇದುವರೆಗೆ ಪರಿಸರದಲ್ಲಿ ಪತ್ತೆಯಾಗಿರುವ ಮೃತದೇಹಗಳ ಸಂಖ್ಯೆ 40ಕ್ಕೆ ಏರಿದೆ.
ತಪೋವನ ಸುರಂಗದ ಅವಶೇಷಗಳ ಅಡಿಯಿಂದ ಮತ್ತೆ ಎರಡು ಮೃತದೇಹಗಳನ್ನು ಪತ್ತೆ ಹಚ್ಚಲಾಗಿರುವ ಬೆನ್ನಿಗೇ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಂಡಿದೆ.
ಫೆಬ್ರುವರಿ 7 ಭಾನುವಾರದಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ-ರೈನಿ ಪ್ರದೇಶದಲ್ಲಿ ನೀರ್ಗಲ್ಲು ಕುಸಿದು ಭಾರೀ ಅನಾಹುತ ಸಂಭವಿಸಿತ್ತು. ಪ್ರವಾಹದ ತೀವ್ರತೆಗೆ ರಿಷಿಗಂಗಾ ವಿದ್ಯುತ್ ಯೋಜನೆ ಹಾನಿಗೊಳಗಾಗಿತ್ತು.
ಘಟನೆಯ ಬಳಿಕ ಇನ್ನೂ 164 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.