Thursday, August 18, 2022

Latest Posts

ಉತ್ತರೆ ಮಳೆಗೆ ತತ್ತರಿಸಿದ ಉಡುಪಿ: ಮಹಾ ಪ್ರವಾಹಕ್ಕೆ ಕೃಷ್ಣನೂರು ಸ್ತಬ್ಧ

ಉಡುಪಿ: ಉತ್ತರೆ ಮಳೆಗೆ ಕೃಷ್ಣನೂರ ಉಡುಪಿ ತತ್ತರಗೊಂಡಿದ್ದು, ಅಕ್ಷರಶಃ ಸ್ತಬ್ಧಗೊಂಡಿದೆ. ನಿನ್ನೆ ಮಧ್ಯಾಹ್ನದಿಂದ ಎಡೆಬಿಡದೇ ಸುರಿಯುತ್ತಿರುವ ಉತ್ತರೆ ಮಳೆಯು ಉಡುಪಿ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಮಹಾ ಪ್ರವಾಹವನ್ನೇ ತಂದಿದೆ. ನೂರಾರು ಕುಟುಂಬಗಳು ಅಪಾಯದಲ್ಲಿದ್ದು, ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಭಾರೀ ಮಳೆ ಸುರಿಯುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ನೀಡಲಾಗಿತ್ತು. ನಿನ್ನೆ ಮಧ್ಯಾಹ್ನ ಆರಂಭವಾದ ಮಳೆ ಹನಿಕಡಿಯದೇ ಸುರಿಯುತ್ತಿದೆ. ರಾತ್ರಿ ಧಾರಾಕಾರ ವರ್ಷಧಾರೆಯಾಗಿದೆ. ಇದರಿಂದ ನಗರದ ಮಧ್ಯದಲ್ಲಿ ಹರಿಯುವ ಇಂದ್ರಾಣಿ ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೊಳೆ ಪಾತ್ರದ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಬೈಲಕೆರೆ, ಮಠದ ಬೆಟ್ಟು, ಕಲ್ಸಂಕ, ಬಡಗುಪೇಟೆ, ಬನ್ನಂಜೆ, ನಿಟ್ಟೂರು ಸಹಿತ ಎಲ್ಲೆಡೆ ಮನೆಗಳಿಗೆ, ಅಂಗಡಿಗಳಿಗೆ ನೀರು ನುಗ್ಗಿದೆ. ಉಡುಪಿ-ಮಣಿಪಾಲ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ನಗರದ ಹೊರವಲಯದಲ್ಲಿ ಅಲೆವೂರು, ಕೆಮ್ತೂರು, ಉದ್ಯಾವರ, ಬೊಳ್ಜೆ, ಬಲೈಪಾದೆ, ಬನ್ನಂಜೆ, ಕಲ್ಮಾಡಿಯ ಸಹಿತ ನೂರಾರು ಮನೆಗಳಿಗೆ ನೆರೆ ನೀರು ತುಂಬಿದೆ.

ಉಡುಪಿಯಲ್ಲಿ 1983ರಲ್ಲಿ ಇದೇ ರೀತಿ ಮಹಾಪ್ರವಾಹ ಉಂಟಾಗಿತ್ತು. ರಾತ್ರೋ ರಾತ್ರಿ ಇಂದ್ರಾಣಿ ಹೊಳೆ ಉಕ್ಕಿ ಹರಿದು, ಸಾವು ನೋವಿಗೆ ಕಾರಣವಾಗಿತ್ತು. ಆ ನಂತರ ಮತ್ತೊಮ್ಮೆ ರಾತ್ರೋ ರಾತ್ರಿ ಸುರಿದ ಮಳೆಗೆ ಇಂದ್ರಾಣಿ ಉಕ್ಕೇರಿದ್ದಾರೆ. ಸುಮಾರು 47 ವರ್ಷಗಳ ಬಳಿಕ ಇತಿಹಾಸ ಮರುಕಳಿಸುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!