ಹೊಸ ದಿಗಂತ ವರದಿ, ಅಂಕೋಲಾ :
2020-25ರ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕುಗಳ ಪೊಲೀಸ್ ವಸತಿಗೃಹಗಳನ್ನು ನಿರ್ಮಿಸಲು ಕ್ರಮ ತೆಗೆದುಕೊಳ್ಳುವುದಾಗಿ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶುಕ್ರವಾರ ಅಂಕೋಲಾ ಬಿಜೆಪಿ ವತಿಯಿಂದ ತಮಗಿತ್ತ ಸ್ವಾಗತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರ ಪೊಲೀಸರಿಗೆ ಎಲ್ಲ ಮೂಲಭೂತ ಸೌಕರ್ಯ ಒದಗಿಸಲು ಬದ್ದವಾಗಿದೆ. ಈಗಾಗಲೇ ಉ.ಕ ಜಿಲ್ಲಾ ಎಸ್ಪಿಯವರ ಜೊತೆ ಅಗತ್ಯ ಇರುವ ಸೌಲಭ್ಯದ ಬಗ್ಗೆ ಮಾಹಿತಿ ಪಡೆದಿರುವೆ ಎಂದರು.
ಪ್ರಮುಖರಾದ ಭಾಸ್ಕರ ನಾರ್ವೇಕರ್, ಬಿಜೆಪಿ ಅಧ್ಯಕ್ಷ ಸಂಜಯ ನಾಯ್ಕ, ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಉಪಾಧ್ಯಕ್ಷೆ ರೇಖಾ ಗಾಂವಕರ್, ಪ್ರಮುಖರಾದ ಕೃಷ್ಣಕುಮಾರ ಮಹಾಲೆ, ಸಂತೋಷ ನಾರ್ವೇಕರ್ , ದಾಮೋದರ ರಾಯ್ಕರಮತ್ತಿತರರು ಇದ್ದರು.