Wednesday, August 17, 2022

Latest Posts

ಉತ್ತರ ಕರ್ನಾಟಕದ ಅತೀ ದೊಡ್ಡ ಸ್ವಾಭಿಮಾನ ಸ್ವದೇಶಿ ಕೇಂದ್ರದ ಉದ್ಘಾಟನೆ ಕಾರ್ಯಕ್ರಮ

ಹೊಸದಿಗಂತ ವರದಿ, ಕಲಬುರಗಿ:

ಪ್ರಪಂಚದಲ್ಲಿ ಬದುಕಿ ಹೋಗಿರುವ ಅನೇಕ ಮಹಾತ್ಮರ ಹಾಗೂ ಚಿಂತಕರ ಶರೀರಗಳು ನಶಿಸಿ ಹೋಗಿವೆ, ಹೊರತು ಅವರ ಹೇಳಿದಂತ, ಕಟ್ಟಿದಂತಹ ವಿಚಾರಗಳು ಇಂದಿಗೂ ನಮ್ಮೊಡನೇ ಜೀವಂತವಾಗಿ ಉಳಿದಿವೆ ಎಂದು ಯಳಸಂಗಿ ಸುಕ್ಷೇತ್ರ ಶ್ರೀ ಸಿದ್ದಾರೂಡ ಮಠದ ಪರಮ ಪೂಜ್ಯ ಶ್ರೀ ಪರಮಾನಂದ ಸ್ವಾಮಿಜೀ ಹೇಳಿದರು.

ಅವರು ಭಾನುವಾರ ನಗರದಲ್ಲಿ ಉತ್ತರ ಕರ್ನಾಟಕದ ಅತೀ ದೊಡ್ಡ ಸ್ವದೇಶಿ ಮಳಿಗೆಯನ್ನು ಉದ್ಘಾಟಿಸಿದ ನಂತರ ಮಾತನಾಡಿ, ಈ ಭೂಮಿ ಮೇಲೆ 84 ಲಕ್ಷ ರಾಶಿ ಜೀವಿಗಳು ನೆಲೆಸಿವೆ. ಅವು ಯಾವುದು ಪ್ರಕೃತಿಗೆ ವಿರೋಧಿಯಾಗಿ ಕೆಲಸ ಮಾಡುತ್ತಿಲ್ಲ, ಆದರೆ ಪ್ರಕೃತಿಗೆ ಮಾತೇಗೆ ವಿರೋಧವಾಗಿ ಕೆಲಸ ಮಾಡುತ್ತಿರುವುದು ಮನುಷ್ಯ ಎಂದು ಹೇಳಿದರು. ಪ್ರಕೃತಿಯನ್ನು ಪೂಜಿಸುವಂತ ಕಾರ್ಯ ನಮ್ಮಿಂದ ಆಗಬೇಕಿದೆ ಎಂದರು. ಭಾರತದ ನೀತಿ, ಸಂಸ್ಕøತಿ, ತನ್ನ ತನ ವನ್ನು ಪರಿಚಯಿಸುವ ಕೆಲಸವನ್ನು ಮನುಷ್ಯನೇ ಮಾಡಬೇಕಿದೆ. ಹೀಗಾಗಿ ಸ್ವದೇಶಿ ಚಿಂತನೆಗಳಿಗೆ ಪ್ರೇರಣೆಯಾಗಿರುವ ರಾಜೀವ ದಿಕ್ಷಿತ ಅವರ ವಿಚಾರಧಾರೆಗಳನ್ನು ಪರಿಚಯಿಸಿ ಭಾರತ ಮಾತೇಯನ್ನು ಪರಮವೈಭವದ ಸ್ಥಿತಿಯಲ್ಲಿ ನಿಲ್ಲಿಸುವ ಕೆಲಸವನ್ನು ಮಾಡುವ ಅನಿವಾರ್ಯವಿದೆ ಎಂದರು.

ರಾಜೀವ ದಿಕ್ಷಿತರ ದೇಶ, ಧರ್ಮ, ಸಂಸ್ಕøತಿ ಸ್ವದೇಶಿ ಉತ್ಪನ್ನಗಳಿಗೆ ಹಾಗೂ ಸಾವಯವ ಕೃಷಿ ಸೇರಿದಂತೆ ಅನೇಕ ಸ್ವದೇಶಿ ಚಿಂತನೆಗಳನ್ನು ಬೇರೂರಿ ಹೋಗಿದ್ದಾರೆ, ಈದೀಗ ನಾವು ನಿವೆಲ್ಲರೂ ಆ ಬೇರುಗಳನ್ನು ಹೆಮ್ಮರವಾಗಿ ಬೆಳೆದು ನಿಲ್ಲಿಸಿ ಅವರ ವಿಚಾರಧಾರೆಗಳನ್ನು ಜೀವಂತವಿಡುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು. ಪ್ರತಿಯೊಬ್ಬ ವ್ಯಕ್ತಿಯೂ ಸ್ವಕಾರ್ಯ, ಸ್ವಾಮಿ ಕಾರ್ಯ ಎಂಬ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ರಾಜೀವ ದಿಕ್ಷಿತ ಅವರು ಮುಟ್ಟಲಾರದ ವಿಚಾರಗಳು ಯಾವುದು ಸಹ ಇಲ್ಲ. ಹೀಗಾಗಿ ಇಂದು ಅವರ ವಿಚಾರಗಳನ್ನು ಮೈಗೂಡಿಸಿಕೊಂಡು ಕಲಬುರಗಿ ನಗರದಲ್ಲಿ ಉತ್ತರ ಕರ್ನಾಟಕದ ಅತೀ ದೊಡ್ಡ ಸ್ವಾಭಿಮಾನ ಸ್ವದೇಶಿ ಕೇಂದ್ರವೊಂದು ಎದ್ದು ನಿಂತಿದೆ ಎಂದು ಈ ಘಳಿಗೆಯಲ್ಲಿ ಶುಭಹಾರೈಸಿದರು.

ಮಾಜಿ ಸಂಸಧರು ಹಾಗೂ ಕ.ಕ.ಮಾ.ಸ.ಕ.ಸ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂ ಮಾತನಾಡಿ, ಒಂದು ನೂರು ವಿಶ್ವ ವಿದ್ಯಾಲಯಗಳು ಮಾಡದ ಕೆಲಸವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರ ಸುಭಾಷಚಂದ್ರ ಭೋಸ್ ಹಾಗೂ ಸ್ವದೇಶಿ ಚಿಂತಕ ರಾಜೀವ ದಿಕ್ಷಿತ ಅವರು ಮಾಡಿದ್ದಾರೆ ಎಂದರು, ಬಾರತ ಶಿಕ್ಷಣ ಪದ್ದತಿ ಹಿಡಿದು ಭಾರತ ತನ್ನತನದ ಮೇಲೆ ಹೇಗೆ ನಿಲ್ಲಬೇಕೆನ್ನುವ ಜ್ಷಾನವನ್ನು ತಿಳಿಸಿದ ರಾಜೀವ ದಿಕ್ಷಿತರು ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ ಎಂದರು. ಇತಿಹಾಸದ ಬಗ್ಗೆ ತಿಳಿದುಕೊಂಡು ನಮ್ಮ ಯುವ ಪೀಳಿಗೆ ರಾಜೀವ ದಿಕ್ಷಿತ ಅವರ ವಿಚಾರಧಾರೆಯನ್ನು ಅವರ ಜೀವನದಲ್ಲಿ ನಿರ್ಮಿಸಿಕೊಂಡು ಸ್ವದೇಶಿ ಪದ್ದತಿ ಜೀವನ ನಡೆಸಬೇಕೆಂದು ಹೇಳಿದರು. ಶುದ್ದವಾದ ನೀರು, ಆಹಾರ ಸೇವಿಸಬೇಕು, ಗೋವಿನ ತುಪ್ಪ, ಹಾಲು, ಹಸಿ ತಪ್ಪಲು ಇತ್ಯಾದಿ ಸಸ್ಯಗಳನ್ನು ಮಕ್ಕಳು ಸೇವಿಸಿದರೇ ಸದೃಡ ಹಾಗೂ ಶಕ್ತಿಶಾಲಿಯಾಗಿ ಬೆಳೆಯುತ್ತಾರೆ ಎಂದರು.

ಸ್ವಾಭಿಮಾನ ಸ್ವದೇಶಿ ಕೇಂದ್ರ ತಂಡದ ಸದಸ್ಯ ಅನಿಲ ತಂಬಾಕೆ ಸ್ವಾಭಿಮಾನ ಸ್ವದೇಶಿ ಕೇಂದ್ರ ಕಳೆದ ಐದು ವರ್ಷದಿಂದ ನಡೆದು ಬಂದ ದಾರಿಯನ್ನು ವಿವರಿಸಿದರು. ಸ್ವದೇಶಿ ಚಿಂತಕ ಕುಂಬಾರ ಅವರು ಪ್ರಾಸ್ತಾವಿಕವಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸ್ವಾಭಿಮಾನ ಸ್ವದೇಶಿ ಕೇಂದ್ರ ತಂಡದ ಸದಸ್ಯರಾದ ಪ್ರಭು ಪಾಟೀಲ, ಅನಿಲ ತಂಬಾಕೆ, ವಿಶಾಲ ಲೋಖಂಡೆ, ಚೈತನ್ಯಕುಮಾರ ಹಾಗೂ ಅಕ್ಷಯ ಕುಲಕರ್ಣಿ ಅವರಿಗೆ ಶ್ರೀ ಗಳು ಶುಭವಾಗಲೆಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತನ ಗೌರವಾಧ್ಯಕ್ಷರಾದ ಶ್ರೀ ಲಿಂಗರಾಜಪ್ಪ ಅಪ್ಪ, ಸೇರಿದಂತೆ ಅನೇಕ ಸ್ವದೇಶಿ ಅಭಿಮಾನಿಗಳು, ಹಿರಿಯರು, ಮಾತೇಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!