Friday, August 12, 2022

Latest Posts

ಉತ್ತರ ಧ್ರುವದ ಮೇಲೆ ಹಾರಾಟ ನಡೆಸಲಿದೆ  ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡ!

ಹೊಸ ದಿಗಂತ ಆನ್ ಡೆಸ್ಕ್:

ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡವು ವಿಶ್ವದ ಅತಿ ಉದ್ದದ ವಾಯು ಮಾರ್ಗ ಉತ್ತರ ಧ್ರುವದ ಮೇಲೆ ಹಾರಾಟ ನಡೆಸಲಿದೆ.  ಈ ಮೂಲಕ ಹೊಸ ಮಹಿಳಾ ಪೈಲಟ್‌ಗಳು ವಿನೂತನ ಇತಿಹಾಸ ನಿರ್ಮಾಣ ಮಾಡಲು ಹೊರಟಿದ್ದಾರೆ.
ಇವರು ಸ್ಯಾನ್ ಫ್ರಾನ್ಸಿಸ್ಕೋ(ಎಸ್ಎಫ್ಒ)ನಿಂದ ಹಾರಾಟ ನಡೆಸಲಿದ್ದು, ಜನವರಿ 9ರಂದು ಬೆಂಗಳೂರಿಗೆ ತಲುಪಲಿದ್ದಾರೆ. ಈ ಪ್ರಯಾಣದ ಒಟ್ಟು ದೂರ ಸುಮಾರು 16,000 ಕಿಲೋ ಮೀಟರ್ ಇರಲಿದೆ.
ಇನ್ನು ಈ ಹಾರಾಟದ ನೇತೃತ್ವವನ್ನು ಏರ್ ಇಂಡಿಯಾ ಮಹಿಳಾ ಕ್ಯಾಪ್ಟನ್ ಜೋಯಾ ಅಗರವಾಲ್  ವಹಿಸಿದ್ದಾರೆ. ಈ ಹಾರಾಟ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಿಂದ ಉತ್ತರ ಧ್ರುವದ ಮೂಲಕ ಬೆಂಗಳೂರಿಗೆ ಸಾಗಿ ಬರಲಿದೆ.
ಜೋಯಾ ಅಗರವಾಲ್ ಜತೆ ತನ್ಮೈ ಪಾಪಗರಿ, ಆಕಾಶಾ ಸೋನವಾನೆ ಮತ್ತು ಶಿವಾನಿ ಮನ್ಹಾಸ್ ಇರಲಿದ್ದಾರೆ .  ಮಹಿಳಾ ಪೈಲಟ್‌ಗಳ ತಂಡ ಉತ್ತರ ಧ್ರುವದ ಮೇಲೆ ಹಾರಾಟ ನಡೆಸಿ ಇತಿಹಾಸ ಸೃಷ್ಠಿಸಲಿದೆ. ವಾಯುಯಾನ ತಜ್ಞರ ಪ್ರಕಾರ, ಉತ್ತರ ಧ್ರುವದ ಮೇಲೆ ಹಾರಾಟ ಅತ್ಯಂತ ಕಠಿಣ ಹಾಗೂ ತಾಂತ್ರಿಕತೆಯಿಂದ ಕೂಡಿರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss