Wednesday, August 10, 2022

Latest Posts

ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ: 14 ವರ್ಷದ ಬಾಲಕಿಯ ತಲೆಯನ್ನು ಕಲ್ಲುಗಳಿಂದ ಜಜ್ಜಿ ಕೊಲೆ

ಲಕ್ನೋ: ಹತ್ರಾಸ್​ನಲ್ಲಿ ಪೈಶಾಚಿಕ ಹಲ್ಲೆ ಎಸಗಿ ಹತ್ಯೆಗೈದ ಘಟನೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದ್ದ ಬೆನ್ನೆಲ್ಲೇ ಭದೋಹಿ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯೊಬ್ಬಳನ್ನ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಅಪರಿಚತ ವ್ಯಕ್ತಿಗಳು ಈ ದಾರುಣ ಕೃತ್ಯ ಎಸಗಿರುವುದು ತಿಳಿದುಬಂದಿದೆ. ಈ ಬಾಲಕಿಯ ತಲೆಯನ್ನು ಕಲ್ಲುಗಳಿಂದ ಜಜ್ಜಿ ಹಾಕಲಾಗಿದೆ. ಈ ಬಾಲಕಿಯನ್ನು ಭದೋಹಿ ಜಿಲ್ಲೆಯ ಚಕ್ರಜಾರಂ ತಿವಾರಿಪುರ್ ಗ್ರಾಮದವಳೆನ್ನಲಾಗಿದೆ.
ಈಕೆ ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಈ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಬಾಲಕಿಯ ಪೋಷಕರು ಇದು ಅತ್ಯಾಚಾರವಾಗಿದೆ ಎಂದು ಹೇಳಿದ್ದಾರೆ. ತಮ್ಮ ಮಗಳನ್ನ ಜಜ್ಜಿ ಕೊಲ್ಲುವ ಮುನ್ನ ಅತ್ಯಾಚಾರ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಬಾಲಕಿಯ ಮರಣೋತ್ತರ ಪರೀಕ್ಷೆಯಿಂದ ಸತ್ಯಾಂಶ ಹೊರಬರಲಿದೆ. ಉತ್ತರ ಪ್ರದೇಶದ ಕ್ರೈಮ್ ವಿಭಾಗದ ಪೊಲೀಸರು ಹಾಗೂ ಫೋರೆನ್ಸಿಕ್ ತಜ್ಞರು ಘಟನಾ ಸ್ಥಳಕ್ಕೆ ಬಂದು ಸಾಕ್ಷ್ಯಾಧಾರಗಳನ್ನ ಕಲೆಹಾಕುತ್ತಿದ್ದು, ಪ್ರಕರಣದ ತನಿಖೆ ಪ್ರಾರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss