ಬಳ್ಳಾರಿ: ಉತ್ತರ ಪ್ರದೇಶದ ಬತ್ರಾಸ್ ಜಿಲ್ಲೆಯಲ್ಲಿ ಯುವತಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ರಾಯಲ್ ವೃತ್ತದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಬಳ್ಳಾರಿ ನಗರ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷ ಜೆ.ಎಸ್. ಆಂಜನೇಯಲು, ಮಾಜಿ ಮೇಯರ್ ಜಿ. ವೆಂಕಟರಮಣ, ಮಾಜಿ ಎಂಎಲ್ಸಿ ಕೆಎಸ್ಎಲ್ ಸ್ವಾಮಿ, ಮಾಜಿ ಉಪಮೇಯರ್ ಬೆಣಕಲ್ ಬಸವರಾಜ್, ಕಾರ್ಪೊರೇಟರ್ಗಳಾದ ಕಮೇಲಾ ಸೂರಿ, ಪರ್ವಿನ್ ಬಾನು, ಮೊಹಮ್ಮದ್, ನ್ಯಾಯವಾದಿ ವೆಂಕಟೇಶ್ ಹೆಗಡೆ, ಬೋಯಪಾಟಿ ವಿಷ್ಣುವರ್ಧನ, ಶ್ರೀರಾಂಪುರ ಕಾಲೊನಿ ಶ್ರೀನಿವಾಸ, ನಾಗರಾಜ, ಮಂಜುಳಾ, ಮಿಲ್ಲರ್ಪೇಟೆ ರಫೀಕ್, ಮಹಿಳಾ ಅಧ್ಯಕ್ಷರು ಶ್ರೀಮತಿ ಪದ್ಮಾವತಿ, ಶೋಭ ಕಾಳಿಂಗ, ಅರುಣ್ ಕುಮಾರ್, ಅರ್ಜುನ್ ಹೆಗಡೆ, ನಿರಂಜನ್ ನಾಯ್ಡು, ಸಂತೋಷ್ ಸ್ವಾಮಿ, ಎಲ್. ಮಾರೆಣ್ಣ, ಮಾಜಿ ಮೇಯರ್ ರಮೇಶ್, ಕನೇಕಲ್ ಮಾಬುಸಾಬ್, ಶರ್ಮಾಸ್ ಸಾಬ್, ಕೊಳಗಲ್ ಅಂಜಿನಿ, ಅಲ್ಲಾಬಕಾಶ್, ಅಕ್ಬರ್, ಗೋನಾಳ್ ನಾಗಭೂಷಣ್ ಗೌಡ, ದಿವಾಕರ ಗೌಡ, ಜುಬೇರ್ ಭಾಷಾ, ರಾಬಿನ್, ದಿವಾಕರ್ ಶಾಂತಿನಗರ ಚಲ್ಲಾ ವೆಂಕಟೇಶ್, ಮಲ್ಲಿಕಾರ್ಜುನ, ಕಾರ್ತಿಕ್, ಲಕ್ಷ್ಮಿನಾರಾಯಣ, ತಿಪ್ಪಯ್ಯ, ಶೀನಾ, ಹಾಗೂ ಕಾಂಗ್ರೆಸ್ ಹಿರಿಯ ನಾಯಕರು, ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.