Wednesday, July 6, 2022

Latest Posts

ಉತ್ತರ ಪ್ರದೇಶ ಯುವತಿ ಹತ್ಯೆ ಪ್ರಕರಣ| ಪ್ರಧಾನಿ ಮೌನವಹಿಸಿದ್ದಾರೆ ಎನ್ನುವ ವಿರೋಧ ಪಕ್ಷಗಳ ಹೇಳಿಕೆ ಸರಿಯಿಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

ಬಳ್ಳಾರಿ: ಉತ್ತರ ಪ್ರದೇಶದಲ್ಲಿ ಯುವತಿ ಮನಿಷ ವಾಲ್ಮಿಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳು‌ ಮೌನವಹಿಸಿದ್ದಾರೆ ಎನ್ನುವ ವಿರೋಧ ಪಕ್ಷಗಳ ಸ್ನೇಹಿತರಿಗೆ ನಾಚಿಗೆಯಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದರು.

ಗುರುವಾರ ನಗರದ ಬಿಜೆಪಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಎಲ್ಲದಕ್ಕೂ ಪ್ರಧಾನಿಗಳೇ ಉತ್ತರಿಸಬೇಕಿಲ್ಲ. ಆ ಘಟನೆ ನಡೆದಿದ್ದು ತಪ್ಪು. ಈಗ ಸುಪ್ರೀಂಕೋರ್ಟ್ ಆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದೆ. ತಪ್ಪಿತಸ್ಥರು ಯಾರೆಂದು ವರದಿ ಬಳಿಕ ಗೊತ್ತಾಗಲಿದೆ. ಅದಕ್ಕೆ ಹೊಣೆ ಯಾರು ಎಂಬುದು ತೀರ್ಮಾನವಾಗಲಿದೆ. ಆರೋಪಿಸುವ ಮುನ್ನ ಕಾಂಗ್ರೆಸ್ ನವರು ಆಲೋಚಿಸಬೇಕು ಎಂದರು.

ಬಿಜೆಪಿ ಟಿಕೆಟ್‌ ಕೊಟ್ರೆ ಜನ ನಾನೋಲ್ಲೇ ನೀನೋಲ್ಲೆ ಅನ್ನುವ ಕಾಲ‌ ಈ ಹಿಂದೆ ಇತ್ತು, ಎನ್ನುವ ಮಾತುಗಳು ಹರಿದಾಡುತ್ತಿದ್ದವು. ಈಗ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೂ ಅಂಥದ್ದೇ ಗತಿ ಬಂದಿದೆ ಎಂದು ವ್ಯಂಗ್ಯವಾಡಿದರು. ಇದೀಗ ಕಾಂಗ್ರೆಸ್, ಜೆಡಿಎಸ್‌ಗೆ ಸೋಲಿನ ಭೀತಿ ಶುರುವಾಗಿದೆ. ಬಿಜೆಪಿ ನಿರಂತರವಾಗಿ ಗೆಲುವಿನ ಗಾಲಿ ಮೇಲೆನೇ ಸಾಗುತ್ತಿದೆ. ಅಷ್ಟೇ ಅಲ್ಲ, ಇನ್ಮುಂದೆ ಗೆಲುವಿನ ಸರಮಾಲೆಯೇ ನಮಗೆ ಒಲಿಯಲಿದೆ ಎಂದು ವ್ಯಕ್ತಪಡಿಸಿದರು. ರಾಜರಾಜೇಶ್ವರಿ ನಗರದ ಉಪಚುನಾವಣೆಯ ಟಿಕೆಟ್ ಮುನಿರತ್ನಗೆ ದೊರೆಯಲಿದೆ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಅಂತಿಮ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದರು. ಈ ಮೊದಲು ನಮ್ಮ ಪಕ್ಷದ ಕೆಲ ಅಭ್ಯರ್ಥಿಗಳು ಸೋಲು ಅನುಭವಿಸಿದ ಹಿನ್ನೆಲೆ ಅಭ್ಯರ್ಥಿಗಳ ಹೆಸರನ್ನು ಆದಷ್ಟು‌ ಮೊದಲೇ ಘೋಷಿಸಲಾಗುತ್ತಿತ್ತು. ಆದರೆ, ಇಂದು ಪಕ್ಷ ಸಾಕಷ್ಟು ಸಂಘಟಿತವಾಗಿದೆ. ಹೆಮ್ಮರವಾಗಿ ಬೆಳೆದಿದೆ. ಸಹಜವಾಗಿ ಆಕಾಂಕ್ಷಿಗಳು ಹೆಚ್ಚಿರುವುದು ಮತ್ತು ಗೆಲುವು ಖಚಿತವಾಗಿರೋದ್ರಿಂದ ಅಭ್ಯರ್ಥಿಗಳ ಆಯ್ಕೆ ತಡವಾಗಿದೆ ಅಷ್ಟೇ ಎಂದು ಆರ್.ಆರ್.‌ನಗರ ಟಿಕೇಟ್ ಕುರಿತು ಸಮಜಾಯಿಷಿ ನೀಡಿದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆದಿದ್ದನ್ನು ಸಮರ್ಥಿಸಿಕೊಂಡ ಅವರು, ಸಿಬಿಐ ತನ್ನ ಕೆಲಸ‌ ಮಾಡುತ್ತಿದೆ, ಯಾರೇ ಆಗಲಿ ತನಿಖೆಗೆ ಎಲ್ಲರೂ ಸಹಕರಿಸಬೇಕು ಎಂದರು. ಕಾಂಗ್ರೆಸ್ ಮುಖಂಡ ವಿ.ಎಸ್‌.ಉಗ್ರಪ್ಪ ಅವರು ನಿನ್ನೆ ಎಲ್ಲಾ ಪಕ್ಷದ ಮುಖಂಡರ ಮನೆ ಮೇಲೆ ದಾಳಿ ನಡೆಯಲಿ ಎಂದು ಸವಾಲು ಹಾಕಿರುವುದು ಹಾಸ್ಯಾಸ್ಪದವಾಗಿದೆ.‌ ಅನುಮಾನ ಬಂದ ವ್ಯಕ್ತಿ ಯಾರೇ ಇರಲಿ ಅಧಿಕಾರಿಗಳು ತಮ್ಮ ಕೆಲಸ ‌ಮಾಡಲಿದ್ದಾರೆ. ಇನ್ನೋಬ್ಬರು ಹೇಳುವ ಅಗತ್ಯವಿಲ್ಲ. ಈ‌ ಹಿಂದೆ ಅವರ ಸರ್ಕಾರ ಇದ್ದಾಗ ಈ‌ ಕೆಲಸ ಯಾಕೆ ಮಾಡಲಿಲ್ಲ ? ಎಂದು ಮರು ಪ್ರಶ್ನೆ ಹಾಕಿದರು. ಈ ಹಿಂದೆ ಸಿಬಿಐ ಬಂಧನದಿಂದ ಜೈಲಿನಿಂದ ಹೊರ ಬಂದ ಡಿಕೆಶಿ ಅವರನ್ನು‌ ಮೆರವಣಿಗೆ ಮೂಲಕ ಕರೆ ತಂದಿದ್ದರು. ಅದೇನು ಘನಂದಾರಿ‌ ಕಾರ್ಯವೇ ? ಎಂದರು.

ಯಾರೇ ಆಗಲಿ, ಜೈಲಿನಿಂದ ಬಿಡುಗಡೆ ಯಾದಾಗ ವಿಜೃಂಭಿಸಿ ಕರೆತರುವುದು ಸರಿಯಲ್ಲ ಎಂದರು. ಕುರುಬರ ಎಸ್​ಟಿ ಸ್ಥಾನ ಮಾನದ ಹೋರಾಟಕ್ಕೆ ಬೆಂಬಲ‌ ಸೂಚಿಸಿರುವೆ. ಕುರುಬ, ಕೋಲಿ ಮೊದಲಾದವರ ಬೇಡಿಕೆ ಹಿನ್ನೆಲೆಯಲ್ಲಿ ನಮ್ಮ ಸಮಾಜದ ಸ್ವಾಮೀಜಿಗಳು ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸುವ ಕುರಿತು ಹೋರಾಟ ಮಾಡಲು ಅ. 11 ರಂದು ಕರೆದಿರುವ ಸಭೆಗೆ ನಮ್ಮ ಬೆಂಬಲ‌ವೂ ಇದೆ ಎಂದರು. ಹಿಂದುಳಿದ ವರ್ಗದಲ್ಲಿರುವ ಸಮುದಾಯಗಳು ಎಸ್​ಟಿಗೆ ಬರುವುದಾದರೆ, ಒಬಿಸಿಯಲ್ಲಿನ ತಮ್ಮ ಮೀಸಲಾತಿ ಪಾಲನ್ನು ತೆಗೆದುಕೊಂಡು ಎಸ್​ಟಿಗೆ ಬರಬೇಕು. ಆ ಮೂಲಕ ಎಸ್​ಟಿಗಳಿಗೆ ಇದರಿಂದ ಅನ್ಯಾಯವಾಗಬಾರದು ಎಂದು ಹೇಳಿದರು.

ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದು ಬಾಕಿ ಇದೆ. ಅದಕ್ಕೂ ಕುರಬರನ್ನು ಎಸ್​ಟಿಗೆ ಸೇರಿಸುವ ಹೋರಾಟಕ್ಕೂ ಸಂಬಂಧವಿಲ್ಲ. ಎಸ್ಟಿಗಳಿಗೆ ಶೇ. 3 ರಿಂದ ಶೇ 7.5 ಕ್ಕೆ‌ಮೀಸಲಾತಿ ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದರು. ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಷಿ ಚುನಾವಣೆಯಲ್ಲಿ‌ ಭರ್ಜರಿ ಗೆಲುವುದು ಸಾಧಿಸಲಿದ್ದಾರೆ, ಇದರಲ್ಲಿ‌‌ ಅನುಮನವೇ ಇಲ್ಲ ಎಂದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಚೆನ್ನಬಸವನಗೌಡ, ಮಾಜಿ ಶಾಸಕ ಟಿ. ಹೆಚ್. ಸುರೇಶ್​ ಬಾಬು, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಹಾಗು ಡಾ.ಮಹಿಪಾಲ್, ಎಚ್.ಹನುಮಂತಪ್ಪ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss