Thursday, June 30, 2022

Latest Posts

ಉತ್ತರ ಪ್ರದೇಶ| 1000 ಬಸ್ ಕೊಡುಗೆ: ಧರಣಿ ಕುಳಿತ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ  ಅಜಯ್ ಕುಮಾರ್ ಲಲ್ಲು ಬಂಧನ

ಲಖನೌ: ಉತ್ತರ ಪ್ರದೇಶ ಕಾಂಗ್ರೆಸ್ ನೀಡಿದ ಖೋಟಾ ಬಸ್ ನೊಂದಣಿಗಳ ವಿರುದ್ಧ ರಾಜ್ಯ ಪೊಲೀಸರು ಪ್ರಕರಣ ದಾಖಲಿಸಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ನನ್ನು ಪೊಲೀಸರು ಬಂಧಿಸಿದ್ದಾರೆ.

1000 ಬಸ್ ಗಳ ಮೂಲಕ ವಲಸೆ ಕಾರ್ಮಿಕರನ್ನು ತಮ್ಮ ಸ್ವಗ್ರಾಮಗಳಿಗೆ ತಲುಪಿಸಲು ನೀಡಿದ ಬಸ್ ಗಳ ನೋಂದಣಿ ಸಂಖ್ಯೆಗಳಲ್ಲಿ ಆಟೋ, ಕಾರು ಹಾಗೂ ಟ್ರಕ್ ಗಳ ಸಂಖ್ಯೆಗಳಿರುವುದನ್ನು ರಾಜ್ಯ ಸರ್ಕಾರ ಪತ್ತೆ ಮಾಡಿದ ಬಳಿಕ ಅಜಯ್ ಕುಮಾರ್ ಲಲ್ಲೂ, ಪ್ರಿಯಾಂಕ ಗಾಂದಿ ವಾಡ್ರಾ ಅವರ ಕಾರ್ಯದರ್ಶಿ ಮತ್ತು ಜೆಎನ್ ಯು ಮಾಜಿ ಅಧ್ಯಕ್ಷ ಸಂದೀಪ್ ಸಿಂಗ್ ವಿರುದ್ಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಇತರ ವಾಹನಗಳ ನೋಂದಣಿ ಸಂಖ್ಯೆ ಇರುವುದನ್ನು ತಿರಸ್ಕರಿಸಿದ ಉತ್ತರ ಪ್ರದೇಶ ಸರ್ಕಾರಕ್ಕೆ ಕಾಂಗ್ರೆಸ್ ಸವಾಲೆಸಗಿದೆ. ಬಳಿಕ ಮಾತನಾಡಿದ ಸರ್ಕಾರಿ ಅಧಿಕಾರಿ ಪರಿಶೀಲಿಸದ ವಾಹನಗಳಲ್ಲಿ 100 ವಾಹನಗಳು ಬಸ್ಸುಗಳಾಗಿರಲಿಲ್ಲ ಹಾಗೂ 297 ಬಸ್ ಗಳಿಗೆ ಫಿಟ್ನೆಸ್ ಪ್ರಮಾಣಪತ್ರ ಹಾಗೂ ಸರಿಯಾದ ವಿಮೆ ಪತ್ರಗಳು ಇಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಮಂಗಳವಾರ ಆಗ್ರಾ ಮತ್ತು ಭಾರತ್ ಪುರ್ ಹೆದ್ದಾರಿಯಲ್ಲಿ ಧರಣಿ ನಡೆಸಿದ ಅಜರ್ ಕುಮಾರ್ ಲಲ್ಲು ಮತ್ತು ಇತರರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss